ಬೆಂಗಳೂರು[ಸೆ.17]  ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಆನುಮೋದನೆ ನೀಡಲಾಗಿದೆ. ಆದರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದಕ್ಕೆ ತಡೆ ನೀಡಲು ಸೂಚನೆ ನೀಡಿದ್ದಾರೆ. 

ಹಾಗಾಗಿ ನಾಗರಿಕರಿಗೆ ತಾಗಬೇಕಿದ್ದ ಶಾಕ್ ಸದ್ಯಕ್ಕೆ ಒಂದಷ್ಟು ದಿನ ಮುಂದಕ್ಕೆ ಹೋಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿದ್ದು  ಬಸ್‌ ಪ್ರಯಾಣ ದರವನ್ನು ಶೇ.18  ಹೆಚ್ಚಳ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು.