ಬೆಂಗಳೂರು(ನ.22): ಇಂದಿರಾನಗರದ ಬಿನ್ನಮಂಗಲದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡುತ್ತಿರುವ ಬಹುಮಹಡಿ ಕಟ್ಟಡ ತೆರವಿಗೆ ಬಿಬಿಎಂಪಿ ನೀಡಿದ ನೋಟಿಸ್‌ ಪ್ರಶ್ನಿಸಿ ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾಲೀಕರ ವಿರುದ್ದ ಪಾಲಿಕೆಯಿಂದಲೂ ಸಮರ್ಥ ನ್ಯಾಯಾಂಗ ಹೋರಾಟದ ಮೂಲಕ ಅಕ್ರಮ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ.

ಗುರುವಾರ ಅಕ್ರಮ ಕಟ್ಟಡ ನಿರ್ಮಾಣದ ಆರೋಪ ಕೇಳಿಬಂದಿರುವ ಸ್ಥಳಕ್ಕೆ ಸ್ಥಳೀಯ ಶಾಸಕ ರಘು ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ನಿತ್ಯಾನಂದ ಸ್ವಾಮಿ ಅಪಹರಿಸಿಲ್ಲ, ತಂಗಿಯೂ ನನ್ನ ಜೊತೆಗಿದ್ದಾಳೆ: ಜನಾರ್ದನ ಶರ್ಮಾ ಪುತ್ರಿ!

ಮಣಿ ಕುಮರನ್‌ ಎನ್ನುವವರು ಬಿಬಿಎಂಪಿಯಿಂದ ಪಡೆದಿರುವ ನಕ್ಷೆ ಉಲ್ಲಂಘಿಸಿ ಐದು ಅಂತಸ್ತಿನ ಕಟ್ಡಡ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಸ್ಥಳೀಯ ದೇವಸ್ಥಾನಕ್ಕೆ ಮತ್ತು ಮುಖ್ಯರಸ್ತೆಗೆ ಹೋಗಲು ಇದ್ದ ದಾರಿಯ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ಆಧಾರದ ಮೇಲೆ ಪಾಲಿಕೆ ಅಧಿಕಾರಿಗಳಲು ಪರಿಶೀಲನೆ ನಡೆಸಿದಾಗ ಮಣಿಕುಮರನ್‌ ಅವರು ನಕ್ಷೆ ಉಲ್ಲಂಘಿಸಿ ಹಾಗೂ ನಿಯಮಗಳನ್ನು ಮೀರಿ ಕಟ್ಟಡ ನಿರ್ಮಿಸಿರುವುದು ಕಂಡುಬಂದಿದೆ. ಹಾಗಾಗಿ ಕಟ್ಟಡ ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು. ಅವರು ಪಾಲಿಕೆ ನೋಟಿಸ್‌ ನೀಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆ ತೆರವಿಗೆ ಸಮರ್ಥ ಕಾನೂನು ಹೋರಾಟ ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಇಂತಹ ಕಟ್ಟಡಗಳ ನಿರ್ಮಾಣ ಮುಂದುವರೆಸಲು ಬಿಡುವುದಿಲ್ಲ. ಸದ್ಯ ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರಬಹುದು. ಪಾಲಿಕೆ ಪರ ವಕೀಲರು ಕೂಡ ಸಮರ್ಥ ವಾದ ಮಂಡಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ. ಇದರಿಂದ ತಡೆಯಾಜ್ಞೆ ತೆರವಾಗುವ ವಿಶ್ವಾಸವಿದೆ. ಅಂತಿಮವಾಗಿ ನ್ಯಾಯಾಲಯದಿಂದ ಆದೇಶ ಬಂದ ಬಳಿಕ ಕಟ್ಟಡ ತೆರವಿನ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

'ಯಾರನ್ನೂ ಬಂಧಿಸಿಟ್ಟಿಲ್ಲ, ಸನ್ಯಾಸಿಯರ ಭೇಟಿಗೆ ಕುಟುಂಬಗಳಿಗೆ ತಡೆ ಒಡ್ಡಿಲ್ಲ'

ಶಾಸಕ ರಘು ಮಾತನಾಡಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಬಿಬಿಎಂಪಿ ಆದೇಶ ಪ್ರಶ್ನಿಸಿ ಕಟ್ಟಡ ಮಾಲಿಕರು ಕೋರ್ಟ್‌ಗೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಶುಕ್ರವಾರ ವಿಚಾರಣೆಗೆ ಬರಲಿದೆ. ಅಂತಿಮ ಆದೇಶದ ಬಳಿಕ ಕಟ್ಟಡ ತೆರಿವಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನವು ನಗರದ ಅಕ್ರಮ ಕಟ್ಟಡಗಳ ವಿರುದ್ಧ ಕರೆಕೊಟ್ಟಿದ್ದ ಆಂದೋಲದ ಪರಿಣಾಮ ನಗರದಾದ್ಯಂತ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಕ್ರಮ ಕಟ್ಟಡಗಳ ವಿರುದ್ಧ ಧನಿ ಎತ್ತುತ್ತಿದ್ದಾರೆ. ಇದರ ಒಂದು ಭಾಗವಾಗಿ ಇಂದಿರಾನಗರ 1ನೇ ಹಂತದ ಬಿನ್ನಮಂಗಲದಲ್ಲಿ ಮಣಿಕುಮರನ್‌ ಎಂಬುವರು ಬಿಬಿಎಂಪಿ ನಕ್ಷೆ ಉಲ್ಲಂಘಿಸಿ ಹಾಗೂ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಿಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಡಿ.4ಕ್ಕೆ 12 ಸ್ಥಾಯಿ ಸಮಿತಿ ಚುನಾವಣೆಗೆ ಮುಹೂರ್ತ

ಈ ಹಿನ್ನೆಲೆಯಲ್ಲಿ ನ.11ರಂದು ಮೇಯರ್‌ ಗೌತಮ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಇದರ ಆಧಾರದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಮಣಿಕುಮರನ್‌ 5 ಮಹಡಿ (16.45 ಮೀಟರ್‌ ಎತ್ತರ) ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ನಕ್ಷೆ ಮಜೂರಾತಿ ಪಡೆದು 18.57 ಮೀಟರ್‌ ಎತ್ತರದ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿರುವುದು ಕಂಡುಬಂದಿತ್ತು. ಹಾಗಾಗಿ ಕಟ್ಟಡ ತೆರವಿಗೆ ನೋಟಿಸ್‌ ನೀಡಿದ್ದರು.