Asianet Suvarna News Asianet Suvarna News

ಸ್ವಚ್ಛ ರೈಲು ನಿಲ್ದಾಣಗಳಲ್ಲಿ ಮೈಸೂರಿಗೆ 9ನೇ ಸ್ಥಾನ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಭಾರತದ ಸ್ವಚ್ಛ ರೈಲು ನಿಲ್ದಾಣಗಳ ಎ-1 ಕ್ಯಾಟಗರಿ ಪಟ್ಟಿಯಲ್ಲಿ ರಾಜಸ್ಥಾನದ ಜೋಧ್‌ಪುರ ರೈಲು ನಿಲ್ದಾಣ ಮೊದಲ ಸ್ಥಾನ ಪಡೆದಿದೆ. ಎ ಕ್ಯಾಟಗರಿ ಪಟ್ಟಿಯಲ್ಲಿ ರಾಜಸ್ಥಾನದ ಮಾರ್ವರ್‌ ಅಗ್ರ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಮೈಸೂರು 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 
 

Clean Railway Station Mysuru Get 9th Place
Author
Bengaluru, First Published Aug 14, 2018, 10:26 AM IST

ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಭಾರತದ ಸ್ವಚ್ಛ ರೈಲು ನಿಲ್ದಾಣಗಳ ಎ-1 ಕ್ಯಾಟಗರಿ ಪಟ್ಟಿಯಲ್ಲಿ ರಾಜಸ್ಥಾನದ ಜೋಧ್‌ಪುರ ರೈಲು ನಿಲ್ದಾಣ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನವನ್ನು ಜೈಪುರ ಮತ್ತು ತಿರುಪತಿ ರೈಲು ನಿಲ್ದಾಣಗಳು ಪಡೆದುಕೊಂಡಿವೆ. 

ಆದರೆ, ಕರ್ನಾಟಕದ ಯಾವುದೇ ರೈಲು ನಿಲ್ದಾಣಗಳು ಈ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಗೆ ಆಯ್ಕೆಯಾಗಿಲ್ಲ. ಇನ್ನು ಎ ಕ್ಯಾಟಗರಿ ಪಟ್ಟಿಯಲ್ಲಿ ರಾಜಸ್ಥಾನದ ಮಾರ್ವರ್‌ ಅಗ್ರ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಮೈಸೂರು 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 

ಈ ಬಗ್ಗೆ ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ರೈಲ್ವೆ ಇಲಾಖೆ, ‘ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸುತ್ತಿರುವ 3ನೇ ಬಾರಿಯ ಅಧ್ಯಯನ ಇದಾಗಿದೆ,’ ಎಂದಿದೆ. ಅಲ್ಲದೆ, 2014ರಲ್ಲಿ ಶೇ.38ರಷ್ಟುಇದ್ದ ನೈರ್ಮಲ್ಯ ವ್ಯವಸ್ಥೆಯನ್ನು ಇದೀಗ 83ಕ್ಕೆ ಏರಿಸಲಾಗಿದೆ. 

ಕಳೆದ ನಾಲ್ಕು ವರ್ಷಗಳಲ್ಲಿ 7 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ಅವರು ಹೇಳಿದ್ದಾರೆ.

(ಸಾಂದರ್ಬಿಕ ಚಿತ್ರ)

Follow Us:
Download App:
  • android
  • ios