ಚಂಡಿಘಡ[ಸೆ. 02] ಇದೊಂದು ವಿಚಿತ್ರ ಪ್ರಕರಣ. ಒಂದನೇ ತರಗತಿಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಹರಿಯಾಣದ ಸಿರ್ಸಾ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬನ ಮೇಲೆ ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಪೊಸ್ಕೋ ಕಾಯ್ದೆಯಡಿ ರೇಪ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.a

ಸಿವಿಲ್ ಆಸ್ಪತ್ರೆಯ ವೈದ್ಯರು ಪರಿಶೀಲನೆ ನಡೆಸಿದ ನಂತರವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಾಲೆಯ ಊಟದ ವಿರಾಮದ ವೇಳೆ ಬಾಲಕಿಯನ್ನು ಬಲಾತ್ಕಾರ ಮಾಡಲು ಬಾಲಕ ಪ್ರಯತ್ನ ಪಟ್ಟಿದ್ದ ಎಂದು ಹುಡುಗಿಯ ತಾಯಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.