Asianet Suvarna News Asianet Suvarna News

ವಿದೇಶಕ್ಕೆ ಪರಾರಿಯಾದ ಉದ್ಯಮಿಯಿಂದ ಜೇಟ್ಲಿ ಮಗಳಿಗೆ 24 ಲಕ್ಷ?

ವಿದೇಶಕ್ಕೆ ಪರಾರಿಯಾದ ಉದ್ಯಮಿಯೋರ್ವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮಗಳಿಗೆ 24 ಲಕ್ಷ ರು. ನೀಡಿದ್ದಾರೆ ಎಂದು  ಕಾಂಗ್ರೆಸ್ ಆರೋಪಿಸಿದೆ. 

Choksi Deposited Lakhs In Bank Account Of Jaitley Daughter Says Congress
Author
Bengaluru, First Published Oct 23, 2018, 11:53 AM IST

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮಗಳು ಹಾಗೂ ಅಳಿಯನ ‘ಲಾ ಕಂಪನಿ’ಯು, ವಿದೇಶಕ್ಕೆ ಪರಾರಿಯಾಗಿರುವ ವಂಚಕ ವಜ್ರೋದ್ಯಮಿ ಮೇಹುಲ್ ಚೋಕ್ಸಿಯಿಂದ 24 ಲಕ್ಷ ರುಪಾಯಿ ರಿಟೇನರ್‌ಶಿಪ್ ಶುಲ್ಕ ಸ್ವೀಕರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇಂಥ ವಂಚಕನ ಜತೆ ಜೇಟ್ಲಿ ಕುಟುಂಬಕ್ಕೆ ನಂಟಿದ್ದು, ಜೇಟ್ಲಿ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. 

ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಚೋಕ್ಸಿ ಕಂಪನಿಯ ಪೇ ರೋಲ್‌ನಲ್ಲಿ ಜೇಟ್ಲಿ ಮಗಳಿದ್ದಾಳೆ. ಐಸಿಐಸಿಐ  ಖಾತೆ ಸಂಖ್ಯೆ 12170500316 ರಿಂದ ಜೇಟ್ಲಿ ಮಗಳಿಗೆ ದುಡ್ಡು ಜಮಾ ಆಗಿದೆ. ಜೇಟ್ಲಿ ಈ ಕೂಡಲೇ ರಾಜೀನಾಮೆ ನೀಡಬೇಕು. ಈ ಸುದ್ದಿ ಹಾಕದಂತೆ ಮಾಧ್ಯಮಗಳ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದಿದ್ದಾರೆ.

ಮರಳಿಸಿದ್ದೇನೆ- ಅಳಿಯ: ಗಮನಾರ್ಹವೆಂದರೆ, ಹಲವು ಸಮಯದ ಹಿಂದೆಯೇ ‘ನಾನು ಚೋಕ್ಸಿ ಹಗರಣ ಬೆಳಕಿಗೆ ಬಂದ ನಂತರ 24 ಲಕ್ಷ ರು. ರಿಟೇನರ್‌ಶಿಪ್ ವಾಪಸು ಮಾಡಿದ್ದೆ’ ಎಂದು ಬಕ್ಷಿ ಸ್ಪಷ್ಟನೆ ನೀಡಿದ್ದರು.

 

Follow Us:
Download App:
  • android
  • ios