Asianet Suvarna News Asianet Suvarna News

ಚೀನಾದಲ್ಲಿ ಭಾರತದ ನೋಟುಗಳ ಮುದ್ರಣ

ಚೀನಾದಲ್ಲಿ ಭಾರತದ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಮುದ್ರಣ ಕಾಣುತ್ತಿವೆ ಎನ್ನುವ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

China Printing Indian Currency Notes
Author
Bengaluru, First Published Aug 14, 2018, 7:23 AM IST

ನವದೆಹಲಿ: ಭಾರತದಲ್ಲಿ ನಕಲಿ ನೋಟುಗಳ ನಿಯಂತ್ರಣಕ್ಕೆ ಸಾಕಷ್ಟುಕ್ರಮಗಳನ್ನು ಕೈಗೊಂಡಿದ್ದರೂ, ನಕಲಿ ನೋಟುಗಳು ಪತ್ತೆಯಾಗುತ್ತಲೇ ಇರುತ್ತವೆ. ಅಂತಾದ್ದರಲ್ಲಿ ಭಾರತದ ನೋಟುಗಳು ಚೀನಾದಲ್ಲಿ ಮುದ್ರಣವಾಗುತ್ತಿವೆ ಎಂಬ ಕಳವಳಕಾರಿ ವರದಿಯೊಂದು ಬಹಿರಂಗವಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಆತಂಕ ವ್ಯಕ್ತಪಡಿಸಿದೆ.

ಚೀನಾದ ಹಣ ಉತ್ಪಾದನಾ ಸ್ಥಾವರದಲ್ಲಿ ಈಗ ನೋಟುಗಳ ಮುದ್ರಣದ ಪ್ರಮಾಣ ತುಂಬಾ ಹೆಚ್ಚಾಗಿದೆ. ಈ ವರ್ಷ ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ತಲುಪಲು ಮುದ್ರಣ ಸ್ಥಾವರಗಳು ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಚೀನಾ ಬ್ಯಾಂಕ್‌ನೋಟ್‌ ಮುದ್ರಣ ನಿಗಮವು ಥಾಯ್ಲೆಂಡ್‌, ಬಾಂಗ್ಲಾದೇಶ್‌, ಶ್ರೀಲಂಕಾ, ಮಲೇಷ್ಯಾ, ಭಾರತ, ಬ್ರೆಜಿಲ್‌ ಮತ್ತು ಪೊಲಾಂಡ್‌ ಸೇರಿದಂತೆ ವಿವಿಧ ದೇಶಗಳ ನೋಟು ಮುದ್ರಣದ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಯಾಗಿದೆ.

ಸುದ್ದಿಯ ಬಗ್ಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಕಳವಳ ವ್ಯಕ್ತಪಡಿಸಿದ್ದು, ಇದು ನಿಜವಾಗಿದ್ದಲ್ಲಿ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ನಕಲಿ ನೋಟುಗಳ ತಡೆಗೆ ಅಪನಗದೀಕರಣ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಅಪನಗದೀಕರಣದ ಬಳಿಕ ನಕಲಿ ನೋಟುಗಳ ಪ್ರಮಾಣ ಶೇ.480 ಪಟ್ಟು ಏರಿಕೆ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios