Asianet Suvarna News Asianet Suvarna News

ಹಾಸನಾಂಬೆ ದೇಗುಲದಲ್ಲಿ ಪವಾಡ ನಡೆಯಲ್ವಾ; ಅರ್ಚಕರು ಬಿಚ್ಚಿಟ್ಟರು ಸತ್ಯ !

ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ನಡೆಯುತ್ತಿರುವ ಪವಾಡಗಳ ಬಗ್ಗೆ ಸತ್ಯಶೋಧನೆಯಾಗಬೇಕೆಂದು ಆಗ್ರಹಿಸಿ ಪ್ರಗತಿಪರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಪವಾಡಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಅರ್ಚಕ ನಾಗರಾಜ್ ದೇವಾಲಯದಲ್ಲಿ ಪವಾಡ ನಡಯೋದೆ ಇಲ್ಲ. ಅಸಲಿಗೆ ನಾವು ಬಾಗಿಲು ಮುಚ್ಚುವ ವೇಳೆ ಅನ್ನ ನೈವೇದ್ಯವನ್ನ ಇಡುವುದೇ ಇಲ್ಲ. ಬಾಗಿಲು ತೆರೆದ ದಿನ ದೇವಿಯ ಶಾಂತಿಗಾಗಿ ಕಡ್ಲೆ ಬೇಳೆ-ಹೆಸರು ಬೇಳೆ ಮಾಡುತ್ತೇವೆ ಅದನ್ನೇ ಭಕ್ತರಿಗೆ ಹಂಚುತ್ತೇವೆ. ದೇವಾಲಯದಲ್ಲಿ  ಪವಾಡ ನಡೆಯುತ್ತೆ ಎಂಬುದು ಕಪೋಲ ಕಲ್ಪಿತ ಕಟ್ಟುಕಥೆ ಎನ್ನುವ ಮೂಲಕ ಹತ್ತಾರು ವರ್ಷಗಳ ವಿವಾದಕ್ಕೆ ಪ್ರಧಾನ ಅರ್ಚಕರು ತೆರೆ ಎಳೆದಿದ್ದಾರೆ.

  • ಹಾಸನಾಂಬೆ ಸನ್ನಿಧಿಯಲ್ಲಿ ಪವಾಡ ನಡೆಯಲ್ವಂತೆ..!
  • ಹೂ ಬಾಡಲ್ಲ, ದೀಪ ಆರಲ್ಲ ಎಂಬುದು ಬರೀ ಸುಳ್ಳಂತೆ..!
  • ‘ಪವಾಡ ನಡೆಯುತ್ತೆ ಅನ್ನೋದು ಕಪೋಲ ಕಲ್ಪಿತ’
  • ಸತ್ಯ ಬಿಚ್ಚಿಟ್ಟ ದೇವಾಲಯದ ಪ್ರಧಾನ ಆರ್ಚಕ

Video Top Stories