ಹಾಸಿನಿ ಕೊಂದ ಪಾಪಿ ಟೆಕ್ಕಿಗೆ ಗಲ್ಲೇ ಗತಿ: ಮದ್ರಾಸ್ ಹೈಕೋರ್ಟ್!

Chennai Techie Who Raped And Killed 7-Year-Old Will Hang, Says Court
Highlights

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣ

ಚೆನ್ನೈ ಟೆಕ್ಕಿ ದಶವಂತ್‌ಗೆ ಗಲ್ಲು ಶಿಕ್ಷೆ ಖಾಯಂ 

ದಶವಂತ್ ಗಲ್ಲು ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ದಶವಂತ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ 

ಚೆನ್ನೈ(ಜು.10): ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ 23 ವರ್ಷದ ಟೆಕ್ಕಿಯ ಗಲ್ಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.

ಕಳೆದ ವರ್ಷ ಫೆಬ್ರವರಿ 19ರಂದು ವಿಚಾರಣಾ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಪ್ರಶ್ನಿಸಿ, ಆರೋಪಿ ಟೆಕ್ಕಿ ಎಸ್. ದಶವಂತ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ವಿಮಲಾ ಮತ್ತು ರಾಮಾತಿಲಿಂಗಮ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.

ಚೆನ್ನೈನಲ್ಲಿ ವಾಸವಿದ್ದ ಸಾಫ್ಟವೇರ್ ಇಂಜಿನಿಯರ್ ದಶವಂತ್ ತನ್ನದೇ ಅಪಾರ್ಟ್ಮೆಂಟ್‌ನಲ್ಲಿದ್ದ ಹಾಸಿನಿ ಎಂಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಯಾರಿಗೂ ತಿಳಿಯಬಾರದೆಂದು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದ.

ಅಲ್ಲದೇ ವಿಚರಣೆ ನಡುವೆ ಜಾಮೀನಿನ ಮೇಲೆ ಹೊರ ಬಂದಿದ್ದ ದಶವಂತ್ ನಂತರ ಬಾಲಕಿಯ ತಾಯಿ ಸರಳಾ ಅವರನ್ನೂ ಕೊಲೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ದಶವಂತ್‌ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

loader