7ನೇ ತರಗತಿ ಬಾಲಕಿ ಮೇಲೆ 7 ತಿಂಗಳಿಂದ ಎರಗಿದ 22 ಕಾಮುಕರು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 8:32 PM IST
Chennai: Class VII girl raped by 22 for 7 months, 18 held
Highlights

ಪೋಷಕರೆ ಎಚ್ಚರ.. ನೀವು ಸುಸಜ್ಜಿತ, ಸುಭದ್ರ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರೂ ನಿಮ್ಮ ಮಕ್ಕಳು ಸುರಕ್ಷಿತವಲ್ಲ. ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಕಾಯಂ ಆಗಿದೆ. ಆದರೆ ಅಷ್ಟೇ ಘೋರವಾದ ಪ್ರಕರಣವೊಂದು ಪಕ್ಕದ ತಮಿಳುನಾಡಿನಲ್ಲಿ ನಡೆದಿದೆ. 7ನೇ ತರಗತಿಯ ಬಾಲಕಿ ಮೇಲೆ ಹಲವಾರು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು 22 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಚೆನ್ನೖ[ಜು.17] ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಒಳಗಡೆ 7 ನೇ ತರಗತಿ ಬಾಲಕಿಯನ್ನು 7 ತಿಂಗಳಿನಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ 22 ಜನರಲ್ಲಿ 18 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತರ ಪೈಕಿ ಅಪಾರ್ಟ್ ಮೆಂಟ್ ನ ಭದ್ರತಾ ಸಿಬ್ಬಂದಿಯೂ ಸೇರಿದ್ದಾನೆ.

ಏಳನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಘಟನೆಯನ್ನು ತನ್ನ ಹಿರಿಯ ಅಕ್ಕನಿಗೆ ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪೋಷಕರ ಗಮನಕ್ಕೆ ತರಲಾಗಿದ್ದು, ಭಾನುವಾರ ದೂರು ದಾಖಲಿಸಲಾಗಿದ್ದು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.ತಂಪು ಪಾನೀಯದಲ್ಲಿ ನಿದ್ರೆ ಬರುವಂತಹ ವಸ್ತು ಸೇರಿಸಿ ಆ ಹುಡುಗಿಗೆ ನೀಡಲಾಗಿತ್ತು. ದೂರು ನೀಡದಂತೆ ಆಕೆಯನ್ನು ಬೆದರಿಸಲಾಗಿತ್ತು .

ಬಂಧಿತರಲ್ಲಿ ಲಿಪ್ಟ್ ಮ್ಯಾನ್ , ನೀರು ಪೂರೈಕೆದಾರನೂ ಸೇರಿದ್ದಾನೆ. ಆ ಹುಡುಗಿಯ ತಂದೆ ಕೆಲಸದ ನಿಮಿತ್ತ ಬಹು ದಿನಗಳವರೆಗೂ ಮನೆಗೆ ಬರುತ್ತಿರಲಿಲ್ಲ. ಈ ಮಧ್ಯೆ ಆಕೆಯ ತಾಯಿ ಗೃಹಿಣಿಯಾಗಿದ್ದು, ಶಾಲೆಯಿಂದ  ಬಾಲಕಿ ತಡವಾಗಿ ಬಂದರೂ ಏನೂ ಕೇಳುತ್ತಿರಲಿಲ್ಲ. ತನ್ನ ಮಗಳು ಕಾಂಪ್ಲೆಕ್ಸ್ ನಲ್ಲಿನ ಸ್ನೇಹಿತರೊಂದಿಗೆ ಆಟವಾಡುತ್ತಿರುವುದಾಗಿ ಭಾವಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

loader