ಚೆನ್ನೈ: 'ಇಲಿ ಹೋದರೆ ಹುಲಿ ಹೋಯ್ತು..' ಎಂಬಂತೆ ಸಣ್ಣ ಪುಟ್ಟ ರೋಗಗಳಿಗೆ ಅರ್ಥವಾಗದ ಹೆಸರನ್ನಿಟ್ಟು ಬೆದರಿಸುವ ಇಂದಿನ ವೈದ್ಯರ ನಡುವೆ 'ವೈದ್ಯೋ ನಾರಾಯಣೋ ಹರಿ:' ಎಂಬುದಕ್ಕೆ ಅನ್ವರ್ಥರಾಗಿದ್ದ, ನಗರದ 5 ರು. ವೈದ್ಯ ಖ್ಯಾತಿಯ ಡಾ.ಜಯಚಂದ್ರ ಕೊನೆಯುಸಿರೆಳೆದಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಚೆನ್ನೈನ ರಾಯಪುರ, ಕಾಸಿಮೇಡು ಪ್ರದೇಶದಲ್ಲಿ ಕೇವಲ 5ರು.ಗೆ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಚಿರಪರಿಚಿತರಾಗಿದ್ದರು. ಕನ್ಸಲ್ಟೇಷನ್ ಫೀ ಕೇವಲ 5 ರು. ಪಡೆಯುತ್ತಿದ್ದ ಇವರು, ಔಷಧೋಪಚಾರಗಳಿಗೆ ತಮ್ಮದೇ ಹಣವನ್ನು ಬಳಸುತ್ತಿದ್ದರು. 

ಯಾವುದೇ ಹಣದ ಹಂಬಲವಿಲ್ಲದೆ, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಇಂಥ ಮಹಾನ್ ವೈದ್ಯರ ನಿಧನಕ್ಕೆ ತಮಿಳುನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. 

ಶ್ರೀಗಳ ಆರೋಗ್ಯ ಜವಾಬ್ದಾರಿ ಹೊತ್ತ ಮೊಹ್ಮದ್ ರೇಲಾ ಯಾರು?

ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವೖದ್ಯಕೀಯ ಶಿಕ್ಷಣ ಪೂರೈಸಿದ ಡಾ.ಜಯಚಂದ್ರ ಅವರು ತಮ್ಮದೇ ಕ್ಲಿನಿಕ್ ನಡೆಸುತ್ತಿದ್ದರು. ಬಡವರಿಗೆ ಆರೋಗ್ಯ ಸೇವೆ ನೀಡುವುದನ್ನೇ ಜೀವನದ ಗುರಿಯಾಗಿಸಿಕೊಂಡಿದ್ದರು. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಕರಾತ್ಮಕ ಪ್ರಭಾವ ಬೀರುತ್ತಲೇ, ಸೇವೆ ಸಲ್ಲಿಸುತ್ತಿದ್ದ ಈ ಸರಳ ವೈದ್ಯರ ನಿಧನಕ್ಕೆ ಸ್ನೇಹಿತ ಎರ್ನೆಸ್ಟ್ ಪೌಲ್ ಸಹ ಮಮ್ಮುಲ ಮರುಗಿದ್ದಾರೆ.

ಕೀನ್ಯಾದ ಬಾಲಕನಿಗೆ ಬೆಂಗಳೂರು ವೈದ್ಯರಿಂದ ಪುನರ್ಜನ್ಮ! ಚಮತ್ಕಾರ ಅಂದ್ರೆ ಇದೇನಾ?