Asianet Suvarna News Asianet Suvarna News

ಹಾಲಿವುಡ್‌ ಸಿನಿಮಾಕ್ಕೆ ಕನ್ನಡದ ಶೆಟ್ಟಿ ನಿರ್ದೇಶಕ!

ಶೆಟ್ಟಿ ಮೊದಲ ಬಾರಿಗೆ ‘ಹಿ ಈಸ್‌ ಬ್ಯಾಕ್‌’ ಎಂಬ ಹಾಲಿವುಡ್‌ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶನ ಮಾಡಲಿದ್ದಾರೆ. ಶೆಟ್ಟಿ ಮೊದಲ ಬಾರಿಗೆ ‘ಹಿ ಈಸ್‌ ಬ್ಯಾಕ್‌’ ಎಂಬ ಹಾಲಿವುಡ್‌ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶನ ಮಾಡಲಿದ್ದಾರೆ.

Cheetah Yajnesh Shetty to direct Hollywood film
Author
Bengaluru, First Published Oct 5, 2018, 9:55 AM IST
  • Facebook
  • Twitter
  • Whatsapp

ಮಂಗಳೂರು :  ಕರಾವಳಿ ಮೂಲದ ಸಾಹಸ ಚಿತ್ರ ನಿರ್ದೇಶಕ ಚೀತಾ ಯಜ್ಞೇಶ್‌ ಶೆಟ್ಟಿ ಮೊದಲ ಬಾರಿಗೆ ‘ಹಿ ಈಸ್‌ ಬ್ಯಾಕ್‌’ ಎಂಬ ಹಾಲಿವುಡ್‌ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶನ ಮಾಡಲಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಜ್ಞೇಶ್‌ ಶೆಟ್ಟಿ, 2019ರ ಫೆಬ್ರವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. ಏಪ್ರಿಲ್‌ ಅಥವಾ ಮೇ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ.

2019ರ ಅಂತ್ಯಕ್ಕೆ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಆಷ್ಘಾನಿಸ್ತಾನದ ಅಬ್ಬಾಸ್‌ ಅಲಿಝಾದಾ ಚಿತ್ರದ ನಾಯಕರಾಗಿದ್ದು, ಅಲಿನಾ ಚಿತ್ರದ ನಾಯಕಿ. ಸುಮಾರು 80ರಿಂದ ನೂರು ಕೋಟಿ ರು. ಬಜೆಟ್‌ನ ಚಿತ್ರ ಎಂದರು.

ಇದು ನನ್ನ ಪ್ರಥಮ ಹಾಲಿವುಡ್‌ ಚಿತ್ರವಾಗಿದ್ದು, ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈ ಹಿಂದೆ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಿಗೆ ನಿರ್ದೇಶನ ನೀಡಿದ ಅನುಭವ ಇದೆ. ಈ ಅನುಭವ ಹಾಲಿವುಡ್‌ನಲ್ಲಿ ನೆರವಿಗೆ ಬರಲಿದೆ ಎಂದರು.

ಸುರೇಶ್‌ ಶರ್ಮ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಸಹ ನಿರ್ಮಾಪಕರಾದ ಅಮರ್‌ಜಿತ್‌ ಶೆಟ್ಟಿ, ರಾಕ್‌ಲೈನ್‌ ವೆಂಕಟೇಶ್‌, ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್‌.ಶೆಟ್ಟಿಚಿತ್ರಕ್ಕೆ ಕ್ಲಾಪ್‌ ಮಾಡಿದರು ಎಂದು ಯಜ್ಞೇಶ್‌ ಶೆಟ್ಟಿತಿಳಿಸಿದರು.

Follow Us:
Download App:
  • android
  • ios