ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ 10 ಲಕ್ಷ ಪರಿಹಾರ

Centre, NALSA fix compensation for rape, acid attack victims
Highlights

ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ಗರಿಷ್ಠ 10 ಲಕ್ಷ ರು. ವರೆಗೂ ಪರಿಹಾರ ನೀಡಬಹುದಾದ ಹೊಸ ನೀತಿಯೊಂದು ಸಿದ್ಧಗೊಂಡಿದೆ. 

ನವದೆಹಲಿ: ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ಗರಿಷ್ಠ 10 ಲಕ್ಷ ರು. ವರೆಗೂ ಪರಿಹಾರ ನೀಡಬಹುದಾದ ಹೊಸ ನೀತಿಯೊಂದು ಸಿದ್ಧಗೊಂಡಿದೆ. 

ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಯಂತಹ ಗಂಭೀರ ಆಘಾತಗಳು ಬಡ ಕುಟುಂಬದ ಮಹಿಳೆಯರಿಗೆ ಆದಾಗ, ಅವರಿಗೆ ನೆರವು ಒದಗಿಸಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ, ಒಂದು ಪರಿಹಾರ ನೀತಿ ರೂಪಿಸಿದೆ. 

ಅತ್ಯಾಚಾರ, ಗ್ಯಾಂಗ್‌ರೇಪ್‌ಗೆ ಗರಿಷ್ಠ 5 ಲಕ್ಷ ರು., ರೇಪ್ ಆಗಿ ಸಾವಿಗೀಡಾದಲ್ಲಿ ಗರಿಷ್ಠ 10 ಲಕ್ಷ ರು. ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೆ 7 ಲಕ್ಷ ಪರಿಹಾರ ನೀಡಲು ಚಿಂತಿಸಲಾಗಿದೆ. 

loader