ಶೇ. 24 ಮಹಿಳೆಯರಿಗಷ್ಟೇ ಎರಡನೇ ಮಗು ಬೇಕು..!

news | Monday, January 22nd, 2018
Suvarna Web Desk
Highlights

ಪ್ರಸ್ತುತ 49ಕ್ಕಿಂತ ಕಡಿಮೆ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಕೇವಲ ಶೇ. 24 ಮಂದಿ 2ನೇ ಮಗುವಿನ ಬಯಕೆ ಹೊಂದಿದ್ದಾರೆ. ದಶಕದ ಹಿಂದೆ ಈ ಪ್ರಮಾಣ ಶೇ. 68 ಇದ್ದುದು, ಈಗ ಭಾರೀ ಇಳಿಕೆಯಾಗಿರುವ ಬಗ್ಗೆ ಸರ್ಕಾರಿ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ನವದೆಹಲಿ: ಪ್ರಸ್ತುತ 49ಕ್ಕಿಂತ ಕಡಿಮೆ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಕೇವಲ ಶೇ. 24 ಮಂದಿ 2ನೇ ಮಗುವಿನ ಬಯಕೆ ಹೊಂದಿದ್ದಾರೆ. ದಶಕದ ಹಿಂದೆ ಈ ಪ್ರಮಾಣ ಶೇ. 68 ಇದ್ದುದು, ಈಗ ಭಾರೀ ಇಳಿಕೆಯಾಗಿರುವ ಬಗ್ಗೆ ಸರ್ಕಾರಿ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ರ ಪ್ರಕಾರ, 15-49ರ ವಯಸ್ಸಿನ ಮಹಿಳೆಯರಲ್ಲಿ ಶೇ. 24 ಮಂದಿ ಮತ್ತೊಂದು ಮಗು ಹೊಂದಲು ಬಯಸಿದ್ದಾರೆ. ಪುರುಷರಲ್ಲಿ ಶೇ. 27 ಮಂದಿ ಮಾತ್ರ ಎರಡನೇ ಮಗುವಿನ ಬಯಕೆ ಹೊಂದಿದ್ದಾರೆ, ಅದು ಕೂಡ ದಶಕದ ಹಿಂದೆ ಶೇ. 49 ಇದ್ದುದು ಈಗ ಇಳಿಕೆಯಾಗಿದೆ. ಮಕ್ಕಳನ್ನು ಬೆಳೆಸುವ ವೆಚ್ಚ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು, ತಡವಾಗಿ ಗರ್ಭ ಧರಿಸುವುದು ಇದಕ್ಕೆ ಕಾರಣವಂತೆ.

 ನಗರಗಳಲ್ಲಿ ಶಿಕ್ಷಿತ ಕುಟುಂಬಗಳು 30ರ ಕೊನೆಯಲ್ಲಿ ಅಥವಾ 40ರ ಆರಂಭದಲ್ಲಿ ಮೊದಲ ಮಗು ಹೊಂದಲು ಬಯಸಿ, ವೈದ್ಯರಲ್ಲಿಗೆ ತೆರಳುತ್ತವೆ. 2011ರ ಗಣತಿ ಅಂಕಿಗಳ ಪ್ರಕಾರ, ಶೇ. 54 ಮಹಿಳೆಯರು ಮಾತ್ರ ಎರಡು ಮಕ್ಕಳನ್ನು ಹೊಂದಿದ್ದಾರೆ. 25-29ರ ನಡುವಿನ ವಯಸ್ಸಿನ ಶೇ. 16 ಮಹಿಳೆಯರಿಗೆ ಮತ್ತು 20-24ರ ವಯಸ್ಸಿನ ಮಹಿಳೆಯರಿಗೆ ಶೇ. 35 ಮಹಿಳೆಯರಿಗೆ ಒಂದು ಮಗುವೂ ಇಲ್ಲ.

Comments 0
Add Comment

    ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸುತ್ತಿರುವವರಿಗೆ ವಾಸ್ತವಾಂಶ ಬಿಚ್ಚಿಟ್ಟ ಪ್ರಧಾನ ಸಂಪಾದಕರು

    news | Saturday, May 26th, 2018