ಜನಾರ್ದನ ರೆಡ್ಡಿಯ 57 ಕೆಜಿ ಚಿನ್ನದಗಟ್ಟಿ ಸುಳಿವು ಪತ್ತೆ ಹಚ್ಚಿದ ಸಿಸಿಬಿ ಪೊಲೀಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 9:12 PM IST
CCB Police takes 2 records about Janardhan Reddys gold dealing in ambident case
Highlights

ಆಂಬಿಡೆಂಟ್‌ ಕಂಪನಿ ವಂಚನೆ ಪ್ರಕರಣದಲ್ಲಿ 57 ಕೆಜಿ ಚಿನ್ನ ಚಿನ್ನ ಖರೀದಿ ಯಾವಾಗ ನಡೆಯಿತು? ಯಾರ ಹೆಸರಿಗೆ ಖರೀದಿ ಮಾಡಲಾಯ್ತು ಮತ್ತು ಅದನ್ನ ಹೇಗೆ ಸಾಗಿಸಲಾಯ್ತು? 

ಬೆಂಗಳೂರು, [ನ.08]: ಆಂಬಿಡೆಂಟ್‌ ಕಂಪನಿ ವಂಚನೆ ಪ್ರಕರಣದಲ್ಲಿ 57 ಕೆಜಿ ಚಿನ್ನ ಸಾಗಾಟದ ಮಾಡಲಾಗಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ಮಹತ್ವದ ದಾಖಲೆ ಕಲೆಹಾಕಿದ್ದಾರೆ. 

ಚಿನ್ನ ಖರೀದಿ ಯಾವಾಗ ನಡೆಯಿತು? ಯಾರ ಹೆಸರಿಗೆ ಖರೀದಿ ಮಾಡಲಾಯ್ತು ಮತ್ತು ಅದನ್ನ ಹೇಗೆ ಸಾಗಿಸಲಾಯ್ತು? ಎನ್ನುವ ಸುಳಿವನ್ನ ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 

ಆಂಬಿಡೆಂಟ್​​ ಕೇಸ್‌: ಜನಾರ್ದನ ರೆಡ್ಡಿಯನ್ನ ಸಿಕ್ಕಿಸಿದ್ದು ಆ ಒಂದು ಫೋನ್ ಕಾಲ್..!

ಈ ಚಿನ್ನ ಖರೀದಿ ಮತ್ತು ಸಾಗಾಟದ ಬಗ್ಗೆ ಗಾಲಿ ಜನಾರ್ಧನ ರೆಡ್ಡಿಯ ಪಾರಿಜಾತ ಅಪಾರ್ಟ್ ಮೆಂಟ್ ಪರಿಶೀಲನೆ ವೇಳೆ ಮಹತ್ವದ ಎರಡು ದಾಖಲೆಗಳು ಪತ್ತೆಯಾಗಿವೆ. 

ಈ ದಾಖಲಾ ಪತ್ರಗಳಲ್ಲಿ ಚಿನ್ನಾಭರಣ ಎಲ್ಲಿದೆ ಅನ್ನೋದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಜನಾರ್ಧನ ರೆಡ್ಡಿ ಬಂಧನಕ್ಕೂ ಮುನ್ನವೇ 57 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

loader