ಕೋಲ್ಕತಾ (ಜ. 12): ಭಾರೀ ಸದ್ದು ಮಾಡಿದ್ದ ಶಾರದಾ ಚಿಟ್‌ಫಂಡ್‌ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ಪತ್ನಿ, ವಕೀಲೆ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ದಾಖಲಿಸಿದೆ.

ಕೋಲ್ಕತಾದ ಬರಸಾತ್‌ ನ್ಯಾಯಾಲಯದಲ್ಲಿ ಚಾಚ್‌ರ್‍ಶೀಟ್‌ ದಾಖಲಿಸಲಾಗಿದ್ದು, 2010-2014ರ ಅವಧಿಯಲ್ಲಿ 1.4 ಚಿಟ್‌ಫಂಡ್‌ ಕಂಪನಿಗಳ ಜತೆ ಅಕ್ರಮದಲ್ಲಿ ಶಾಮೀಲಾಗಿ ಕೋಟಿ ರು. ಪಡೆದಿದ್ದಾರೆಂಬ ಆರೋಪ ನಳಿನಿ ಚಿದಂಬರಂ ಅವರ ಮೇಲಿದೆ.

ನಳಿನಿ ಅವರು ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ ಅವರ ಪತ್ನಿ. ಶಾರದಾ ಗ್ರೂಪ್‌ ಅವ್ಯವಹಾರ ಪ್ರಕರಣದ 6ನೇ ಸಪ್ಲಿಮೆಂಟರಿ ಚಾಜ್‌ರ್‍ಶೀಟ್‌ ಇದಾಗಿದೆ.

ಚಿದಂಬರಂಗೆ ತಾತ್ಕಾಲಿಕ ರಿಲೀಫ್‌:

ಈ ನಡುವೆ, ಏರ್‌ಸೆಲ್‌ ಮ್ಯಾಕ್ಸಿಸ್‌ ಒಪ್ಪಂದ ಪ್ರಕರಣ ಸಂಬಂಧ ಮಾಜಿ ವಿತ್ತ ಸಚಿವ ಚಿದಂಬರಂಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ದೆಹಲಿ ವಿಶೇಷ ನ್ಯಾಯಾಲಯ ಫೆ.1ರ ತನಕ ವಿಸ್ತರಿಸಿದೆ. ಇದರಿಂದಾಗಿ ಬಂಧನದ ಭೀತಿಯಲ್ಲಿದ್ದ ಚಿದಂಬರಂಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ಏರ್‌ಸೆಲ್‌ ಮ್ಯಾಕ್ಸಿಸ್‌ ತರಂಗಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ.ಒ.ಪಿ. ಸೈನಿ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದರು. ಸಿಬಿಐ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಚಿದಂಬರಂ ಮತ್ತು ಕಾರ್ತಿ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ಎ.ಎಂ.ಸಿಂಘ್ವಿ ವಾದ ಮಂಡಿಸಿದರು.