ಸೌಜನ್ಯ ಅತ್ಯಾಚಾರ, ಕೊಲೆ ಆರೋಪ ಪ್ರಕರಣ : ಮೂವರಿಗೆ ಸಿಬಿಐ ಸಮನ್ಸ್
ಸಿಬಿಐ ಪರ ಶಿವಾನಂದ ಪೆರ್ಲ ಅವರು ವಾದ ಮಂಡಿಸಿದ್ದರು. ಸಂತೋಷ್ ರಾವ್ ವಿರುದ್ಧ ಚಾರ್ಜ್ಶೀಟ್ ದಾಖಲಾಗಿತ್ತು. ಆದರೆ ಇದಕ್ಕೆ ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರು(ನ.19): ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ, ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಜೈನ್ ಅವರನ್ನು ಆರೋಪಿಗಳಾಗಿ ಪರಿಗಣಿಸಿ ಸಿಬಿಐ ವಿಶೇಷ ಜಡ್ಜ್ ರೇಖಾ ಅವರು ಸಮನ್ಸ್ ಆದೇಶ ಹೊರಡಿಸಿದ್ದಾರೆ. ಸಿಬಿಐ ಪರ ಶಿವಾನಂದ ಪೆರ್ಲ ಅವರು ವಾದ ಮಂಡಿಸಿದ್ದರು. ಸಂತೋಷ್ ರಾವ್ ವಿರುದ್ಧ ಚಾರ್ಜ್ಶೀಟ್ ದಾಖಲಾಗಿತ್ತು. ಆದರೆ ಇದಕ್ಕೆ ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೇವಲ ಸಂತೋಷ್ ರಾವ್ನಿಂದ ಕೃತ್ಯ ಸಾಧ್ಯವಾಗಲಾರದು,ಆತ ಮಾನಸಿಕ ಖಿನ್ನತೆ ಹೊಂದಿರುವ ವ್ಯಕ್ತಿ ಎಂದು ಜಡ್ಜ್ ರೇಖಾ ಬಿ.ಎಸ್ ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 29ರಂದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಸಿವಿಲ್ ಕೋರ್ಟ್ ಆವರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ಇದೆ. ಅಕ್ಟೋಬರ್ 9, 2012ರಂದು ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆ ನಡೆದಿತ್ತು.