Asianet Suvarna News Asianet Suvarna News

ತಾಯಿ, ಮಗಳ ಮೇಲೆ ರೇಪ್‌: 7 ಪೊಲೀಸರು ಸೇರಿ 18 ಜನರ ವಿರುದ್ಧ ಕೇಸು ದಾಖಲು!

ಹರಿಯಾಣದಲ್ಲಿ ನಡೆದ ಅಮಾಯಕ ಘಟನೆಯೊಂದರಲ್ಲಿ ಎಎಸ್‌ಐ ಸೇರಿ 18 ಮಂದಿ ತಾಯಿ ಮಗಳ ವಿರುದ್ಧವೇ ನಿರಂತರವಾಗಿ ಅತ್ಯಾಚಾರವೆಸಗಲಾಗಿತ್ತು. ಈಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Case filed against 18 who rape mother and duaghter
Author
Bengaluru, First Published Oct 5, 2018, 10:17 AM IST

ಕೈಥಾಲ್‌(ಹರ್ಯಾಣ): ತಾಯಿ ಮತ್ತು ಮಗಳ ಮೇಲೆ ಗ್ಯಾಂಗ್‌ರೇಪ್‌ ನಡೆಸಿದ ಆರೋಪ ಮೇಲೆ 7 ಪೊಲೀಸರು ಸೇರಿದಂತೆ 18 ಜನರ ವಿರುದ್ಧ ಹರ್ಯಾಣ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ‘ಕಳೆದ ತಿಂಗಳು ತನ್ನ ಹಾಗೂ ತನ್ನ ತಾಯಿಯ ಮೇಲೆ ಎಎಸ್‌ಐ ಸೇರಿದಂತೆ ಹಲವು ಪೊಲೀಸರು ಅತ್ಯಾಚಾರ ಎಸಗಿದ್ದಾರೆ.

ಇದಕ್ಕೆ ಗ್ರಾಮದ ಸರಪಂಚ್‌ ಹಾಗೂ ಮಾಜಿ ಸರಪಂಚ್‌ ಸೇರಿ ನೆರವು ನೀಡಿದ್ದರು’ ಎಂಬು ಬಾಲಕಿಯೊಬ್ಬಳು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ತನಿಖೆಗಾಗಿ ಡಿಎಸ್‌ಪಿ ರಾರ‍ಯಂಕ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲಾಗಿದೆ ಎಂದು ಕೈಥಾಲ್‌ ಎಸ್‌ಪಿ ಆಸ್ತಾ ಮೋದಿ ಅವರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ತನ್ನ ತಂದೆಯ ವಿರುದ್ಧವೇ ಬಾಲಕಿ ಅತ್ಯಾಚಾರ ಕೇಸ್‌ ದಾಖಲಿಸಿದ್ದಳು. ಆದರೆ, ಕೆಲವು ದಿನಗಳ ಬಳಿಕ ಪ್ರಕರಣವನ್ನು ವಾಪಸ್‌ ಪಡೆದಿದ್ದಳು ಎಂದಿದ್ದಾರೆ ಪೊಲೀಸರು.

Follow Us:
Download App:
  • android
  • ios