ಎಚ್.ಡಿ ರೇವಣ್ಣ ಪುತ್ರನ ವಿರುದ್ಧ ದೂರು : ಇನ್ಸ್ ಪೆಕ್ಟರ್ ಎತ್ತಂಗಡಿ

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Jul 2018, 8:55 AM IST
Case Against Revanna Son Inspector Transferred
Highlights

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಚಿವ ಎಚ್.ಡಿ. ರೇವಣ್ಣ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಚನ್ನರಾಯಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ಹರೀಶ್ ಬಾಬು ಎಂಬುವರನ್ನು ಒಂದು ವರ್ಷ ಪೂರ್ತಿಗೊಳಿ ಸುವ ಮುನ್ನವೇ ಎತ್ತಂಗಡಿ ಮಾಡಲಾಗಿದೆ. 

ಹಾಸನ: ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಚಿವ ಎಚ್.ಡಿ. ರೇವಣ್ಣ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಚನ್ನರಾಯಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ಹರೀಶ್ ಬಾಬು ಎಂಬುವರನ್ನು ಒಂದು ವರ್ಷ ಪೂರ್ತಿಗೊಳಿ ಸುವ ಮುನ್ನವೇ ಎತ್ತಂಗಡಿ ಮಾಡಲಾಗಿದೆ. ಆಡಳಿತ ವಿಭಾಗದ ಎಡಿಜಿಪಿ ಡಾ.ಪರಶಿವ ಮೂರ್ತಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. 

ವಿಧಾನಸಭೆ ಚುನಾವಣೆ ವೇಳೆ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವಿಧಾಸಭಾ ಕ್ಷೇತ್ರದ ಎ.ಕಾಳೇನಹಳ್ಳಿ ಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನ ಜಿ.ಪಂ. ಸದಸ್ಯ ಶ್ರೇಯಸ್ ಎಂಬುವರ ಕಾರನ್ನು ಜಖಂಗೊಳಿಸಲಾಗಿತ್ತು. ಇದಕ್ಕೆ ರೇವಣ್ಣ ಅವರ ಪುತ್ರ  ಡಾ.ಸೂರಜ್ ಕಾರಣ ಎಂದು ಶ್ರೇಯಸ್ ದೂರು ನೀಡಿದ್ದರು. 

ಹೀಗಾಗಿ ಸೂರಜ್  ವಿರುದ್ಧ ಇನ್ಸ್‌ಪೆಕ್ಟರ್ ಹರೀಶ್ ಬಾಬು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

loader