ನವದೆಹಲಿ(ಫೆ.28): ಪಾಕ್ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಸುರಕ್ಷಿತ ಬರುವಿಕೆಗಾಗಿ ಇಡೀ ದೇಶ ಕಾಯುತ್ತಿದೆ.

ಈ ಮಧ್ಯೆ ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶತ್ರುಗಳಿಗೆ ಸೆರೆ ಸಿಕ್ಕ ಬಳಿಕವೂ ಬೆದರದೆ ಯಾವುದೇ ಮಾಹಿತಿ ನೀಡದ ಮಗನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಗ ಸುರಕ್ಷಿತವಾಗಿ ಮರಳಿ ಬರುವ ಭರವಸೆ ವ್ಯಕ್ತಪಡಿಸಿದ ಅವರು, ಆದರೆ ಶತ್ರುಗಳಿಗೆ ಮಗ ಯಾವುದೇ ರಹಸ್ಯ ಮಾಹಿತಿ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇತ್ತ ವಿಂಗ್ ಕಮಾಂಡರ್ ಮರಳಿಕೆಗೆ ಪ್ರಾರ್ಥಿಸಿ ಉಡುಪಿಯ ಕಟಪಾಡಿ ಸಾಯಿ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.