ಶ್ರೀನಗರ : ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಪ್ರಪಾತಕ್ಕೆ ಉರುಳಿ 11 ಮಂದಿ ಮೃತಪಟ್ಟಿರುವ ದಾರುಣ  ಘಟನೆ  ಜಮ್ಮು ಕಾಶ್ಮೀರದ್ ಪೂಂಚ್ ನಲ್ಲಿ  ನಡೆದಿದೆ. 

ಪೂಂಚ್ ನಿಂದ ಲೋರಾನ್ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಸ್ಕಿಡ್  ಆಗಿ ಬಸ್ ಪ್ರಪಾತಕ್ಕೆ  ಉರುಳಿ ಬಿದ್ದಿದೆ. 

ಬಸ್ ಪ್ರಪಾತಕ್ಕೆ ಉರುಳುತ್ತಿದ್ದಂತೆ ಸ್ಥಳಿಯರು ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.