Asianet Suvarna News Asianet Suvarna News

ಬುರಾರಿ ಕೇಸ್​ಗೆ ಟ್ವಿಸ್ಟ್​: 11 ಮಂದಿಯದ್ದು ಆತ್ಮಹತ್ಯೆ ಅಲ್ವಂತೆ!

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ! 11 ಜನರದ್ದು ಆತ್ಮಹತ್ಯೆಯಲ್ಲ ಎಂದ ವರದಿ! ಮನೋವೈಜ್ಞಾನಿಕ ಅಟೋಪ್ಸಿ ಅಧ್ಯಯನದಲ್ಲಿ ಬಹಿರಂಗ! ಮೌಢ್ಯ ಆಚರಣೆ ವೇಳೆ ಆಕಸ್ಮಿಕವಾಗಿ ನಡೆದ ಸಾವು

Burari Deaths Not Suicide But Accident: Forensic Lab Report
Author
Bengaluru, First Published Sep 15, 2018, 2:25 PM IST

ನವದೆಹಲಿ(ಸೆ.15): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉತ್ತರ ದೆಹಲಿಯ ಬುರಾರಿ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕಳೆದ ಜುಲೈನಲ್ಲಿ ನಡೆದ ಒಂದೇ ಕುಟುಂಬದ 11 ಜನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತ ಸಿಎಫ್‌ಎಸ್‌ಎಲ್ ವರದಿ ಬಹಿರಂಗವಾಗಿದೆ. 

ಕುಟುಂಬದ ಯಾವುದೇ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಬದಲಾಗಿ ಮೌಢ್ಯ ಆಚರಣೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಪೊಲೀಸರು ಜುಲೈನಲ್ಲಿ ಸಿಬಿಐ ಅಧಿಕಾರಿಗಳ ಬಳಿ ಸೈಕಲಾಜಿಕಲ್​ ಅಟೋಪ್ಸಿ ಮಾಡುವಂತೆ ತಿಳಿಸಿದ್ದರು, ಈ ವರದಿ ಇದೀಗ ಪೊಲೀಸರ ಕೈ ಸೇರಿದೆ. 

ವರದಿಯನ್ವಯ ಮೃತರ ಮನೋವೈಜ್ಞಾನಿಕ ಅಟೋಪ್ಸಿ ಅಧ್ಯಯನದಲ್ಲಿ ಈ ಘಟನೆಯು ಆತ್ಮಹತ್ಯೆಯಲ್ಲ, ಬದಲಾಗಿ ಮೌಢ್ಯದ ಆಚರಣೆ ನಡೆಯುವಾಗ ಸಂಭವಿಸಿದ ದುರ್ಘಟನೆ ಇದಾಗಿದೆ, ಯಾವೊಬ್ಬ ಸದಸ್ಯನೂ ಜೀವ ಕಳೆದುಕೊಳ್ಳಲು ಇಚ್ಛಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಸೈಕಲಾಜಿಕಲ್​ ಅಟೋಪ್ಸಿ ಸಂದರ್ಭದಲ್ಲಿ ಸಿಬಿಐನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯವು, ಮೃತದೇಹಗಳು ಪತ್ತೆಯಾದ ಮನೆಯಲ್ಲಿ ಸಿಕ್ಕ ರಿಜಿಸ್ಟರ್​ನಲ್ಲಿ ಬರೆಯಲಾದ ವಿಚಾರಗಳು ಹಾಗೂ ಪೊಲೀಸರು ದಾಖಲಿಸಿಕೊಂಡಿದ್ದ ದಿನೇಶ್ ಸಿಂಗ್ ಚೂಂಡಾವತ್​ ಕುಟುಂಬ ಸದಸ್ಯರು ಹಾಗೂ ಮಿತ್ರರು ನೀಡಿದ್ದ ಹೇಳಿಕೆಗಳ ವಿಶ್ಲೇಷಣೆ ನಡೆಸಿತ್ತು.

ಏನಿದು ಸೈಕಲಾಜಿಕಲ್ ​ಅಟೋಪ್ಸಿ?:

ಸೈಕಲಾಜಿಕಲ್​ ಅಟೋಪ್ಸಿಯಲ್ಲಿ ವ್ಯಕ್ತಿಯೊಬ್ಬನ ವೈದ್ಯಕೀಯ ದಾಖಲೆಯ ವಿಶ್ಲೇಷಣೆ ನಡೆಸಲಾಗುತ್ತದೆ. ಇದರೊಂದಿಗೆ ಅವರ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಿ, ಸಾಯುವ ಮೊದಲು ಅವರ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಅಧ್ಯಯನ ನಡೆಸಲಾಗುತ್ತದೆ. ಈ ಮೂಲಕ ವ್ಯಕ್ತಿ ಸಾಯುವ ಮುನ್ನ ಆತನ ಮಾನಸಿಕ ಸ್ಥಿತಿ ಹೇಗಿತ್ತು ಎಂದು ತಿಳಿಯುವ ಪ್ರಯತ್ನ ನಡೆಯುತ್ತದೆ.

ಬೆಚ್ಚಿ ಬಿದ್ದ ರಾಜಧಾನಿ: ಒಂದೇ ಕುಟುಂಬದ 11 ಜನ ನಿಗೂಢ ಸಾವು!

ದೆಹಲಿ ಸಾಮೂಹಿಕ ಆತ್ಮಹತ್ಯೆಗೆ ಹೊಸ ಟ್ವಿಸ್ಟ್ ?

11 ಜನ ಸತ್ತ ಮನೆಯಲ್ಲಿ 11 ಪೈಪ್: ಏನಿದರ ರಹಸ್ಯ?

ದಿಲ್ಲಿಯ 11 ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ದಿಲ್ಲಿಯಲ್ಲಿ 11 ಮಂದಿ ಆತ್ಮಹತ್ಯೆ ಪ್ರಕರಣ : ಸಿಸಿಟಿವಿ ಬಿಚ್ಚಿಟ್ಟ ಸತ್ಯವೇನು..?

11 ಜನರ ಆತ್ಮಹತ್ಯೆ ಬಗ್ಗೆ ಬಯಲಾಯ್ತು ಬೆಚ್ಚಿ ಬೀಳಿಸುವ ಸಂಗತಿ..!

ದಿಲ್ಲಿ ಕುಟುಂಬ ಆತ್ಮಹತ್ಯೆ ಹಿಂದೆ ಅತೃಪ್ತ ಆತ್ಮದ ಕಥೆ

ಬುರಾರಿ ಸೂಸೈಡ್ ಕೇಸ್‌ನಲ್ಲಿದೆ ಮ್ಯಾನೇಜ್‌ಮೆಂಟ್ ಸ್ಕಿಲ್ ಪಾಠ!

ಬುರಾರಿ ಫ್ಯಾಮಿಲಿಯ ಕೊನೆ ಸದಸ್ಯನಿಗೂ ಸಾವು ಬಂತು!

Follow Us:
Download App:
  • android
  • ios