ಮಂಡ್ಯ (ಫೆ. 13): ಯಾವಾಗಲೂ ತನ್ನ ಜೊತೆಗೆ ಇರುತ್ತಿದ್ದ ಗೆಳೆಯನ ಸಾವನ್ನು ಕಂಡು ಬಸವ ಕಣ್ಣೀರಿಟ್ಟಿದ್ದಾನೆ. 

ಮಂಡ್ಯದ ಮಾರುತಿ ನಗರದ ಮುತ್ತುರಾಯ ದೇವಸ್ಥಾನದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಇಂದು ಸಾವನ್ನಪ್ಪಿದೆ. ಬಸವನನ್ನು ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರಕ್ಕೆ ಕರೆ ತಂದಾಗ ಮತ್ತೊಂದು ಬಸವ ಅಲ್ಲಿಗೆ ಬಂದಿದೆ. ಗೆಳೆಯನ ಸಾವನ್ನು ಕಂಡು ಕಣ್ಣೀರಿಟ್ಟಿದೆ. ಮೂಕವೇದನೆ ಅನುಭವಿಸಿದೆ. ಈ ದೃಶ್ಯ ಹೃದಯ ಕಲಕುವಂತಿತ್ತು. 

ಪ್ರಾಣಿಗಳ ಮೂಕ ಪ್ರೀತಿ ಎಂದರೆ ಇದೇ ಅಲ್ಲವೇ? 

"