ನಾಳೆ ದಲಿತ ಕಾಲೋನಿಯಲ್ಲಿ ಬಿಎಸ್’ವೈ ಉಪಹಾರ ಸೇವನೆ

BSY Visit Dalits Houses
Highlights

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಮನ ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ದಲಿತರ ಮತ ಸೆಳೆಯಲು ಬಿಎಸ್’ವೈ  ದಲಿತರ ಮನೆಯತ್ತ  ತೆರಳಲಿದ್ದಾರೆ.
ದಲಿತರ ಕಾಲನಿಗೆ ಭೇಟಿ ನೀಡಿ, ಉಪಹಾರ ಸೇವಿಸಲಿದ್ದಾರೆ. ನಾಳೆ  ಬೆಳಿಗ್ಗೆ 9 ಗಂಟೆಗೆ ನೆಲಮಂಗಲದ ಮೇಲ್ನಳ್ಳಿ ದಲಿತರ ಕಾಲನಿಗೆ ಭೇಟಿ ನೀಡಿ  ಉಪಾಹಾರ ಸೇವನೆ ಮಾಡಲಿದ್ದಾರೆ. 

ಬೆಂಗಳೂರು (ಏ. 13): ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಮನ ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ದಲಿತರ ಮತ ಸೆಳೆಯಲು ಬಿಎಸ್’ವೈ  ದಲಿತರ ಮನೆಯತ್ತ  ತೆರಳಲಿದ್ದಾರೆ.
ದಲಿತರ ಕಾಲನಿಗೆ ಭೇಟಿ ನೀಡಿ, ಉಪಹಾರ ಸೇವಿಸಲಿದ್ದಾರೆ. ನಾಳೆ  ಬೆಳಿಗ್ಗೆ 9 ಗಂಟೆಗೆ ನೆಲಮಂಗಲದ ಮೇಲ್ನಳ್ಳಿ ದಲಿತರ ಕಾಲನಿಗೆ ಭೇಟಿ ನೀಡಿ  ಉಪಾಹಾರ ಸೇವನೆ ಮಾಡಲಿದ್ದಾರೆ. 

ನಾಳೆ  ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆ ಮಧ್ಯಾಹ್ನ  ಶಾಂತಿನಗರದಲ್ಲಿ ನಡೆಯಲಿರುವ  ಮೆರವಣಿಗೆಯಲ್ಲಿ ಬಿಎಸ್​ವೈ ಭಾಗಿಯಾಗಲಿದ್ದಾರೆ.  ಅಂಬೇಡ್ಕರ್​ ಕುರಿತ ಕಾರ್ಯಕ್ರಮಗಳಲ್ಲಿ ದಿನವಿಡೀ ಬಿಎಸ್​ವೈ ಭಾಗಿಯಾಗಲಿದ್ದಾರೆ. 
ಮಧ್ಯಾಹ್ನ ಆಯ್ದ 15  ಪೌರಕಾರ್ಮಿಕರ ಜತೆ  ಭೋಜನ ಸೇವಿಸಲಿದ್ದಾರೆ.  ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. 

(ಸಾಂದರ್ಭಿಕ ಚಿತ್ರ)

loader