ಬುಜ್(ಅ.12): ಗುಜರಾತ್‌ನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ(BSF) ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ನಿಯಮಿತ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಈ ಅನುಮಾನಾಸ್ಪದ ಬೋಟ್‌ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.

ಅಕ್ಟೋಬರ್ 11 ರಂದು ರಾತ್ರಿ 10-45 ರ ಸುಮಾರಿನಲ್ಲಿ ಹರಮಿ ನುಲ್ಲಾ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಸೇರಿದ ಐದು ಮರದ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಳೆದ ವಾರ ಪಾಕಿಸ್ತಾನದ ಎರಡು ಮರದ ಮೀನುಗಾರಿಕಾ ಬೋಟ್‌ಗಳನ್ನು ಗಡಿ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.