Asianet Suvarna News Asianet Suvarna News

ಬಿಎಸ್‌ವೈ ಬಂತಾ ವರಿಷ್ಠರ ಸಂದೇಶ, ನೆರೆಯಿಂದ ಹೆಚ್ಚಿದ ಸಂಕಷ್ಟ; ಜು.25ರ ಟಾಪ್ 10 ಸುದ್ದಿ

ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದಿರುವ ಬಿಎಸ್ ಯಡಿಯೂರಪ್ಪಗೆ ವರಿಷ್ಠರಿಂದ ಸಂದೇಶಾ ಬಂದಿದೆಯಾ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಅರ್ಧ ಕರ್ನಾಟಕ ಮಳೆಗೆ ಮುಳುಗಡೆಯಾಗಿದೆ. ಮೀರಾಬಾಯಿ ಚಾನುಗೆ 1 ಕೋಟಿ ಬಹುಮಾನ ಘೋಷಿಸಲಾಗಿದೆ. ಮನ್‌ ಕೀ ಬಾತ್‌ನಲ್ಲಿ ಕರ್ನಾಟಕದ ‘ಬಾಕಾಹು’ಗೆ ಮೋದಿ ಮನ್ನಣೆ ನೀಡಿದ್ದಾರೆ. ಪ್ರಿಯಾ ಮಲಿಕ್‌ಗೆ ಚಿನ್ನ, ಕೋಟಿ ಒಡೆಯಾ ಕುಂದ್ರಾಗೆ ತಪ್ಪು ದಾರಿ ಯಾಕೆ? ಜುಲೈ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

BS Yediyurappa resignation rumours to Monsoon Karnataka rain Flood top 10 News ckm
Author
Bengaluru, First Published Jul 25, 2021, 5:13 PM IST
  • Facebook
  • Twitter
  • Whatsapp

ಮನ್‌ ಕೀ ಬಾತ್: ಕರ್ನಾಟಕದ ‘ಬಾಕಾಹು’ಗೆ ಮೋದಿ ಮನ್ನಣೆ!

BS Yediyurappa resignation rumours to Monsoon Karnataka rain Flood top 10 News ckm

ಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ತಿಂಗಳ ರೇಡಿಯೋ ಕಾರ್ಯಕ್ರಮದ 79ನೇ ಸರಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಂಡು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ ಎಂದು ಕರೆ ನೀಡಿದ್ದಾರೆ.

ಗರಿಗೆದರಿದೆ ಭಾರೀ ಕುತೂಹಲ: ಶ್ರಾವಣಕ್ಕೆ ಹೊಸ ಸಿಎಂ? ದೆಹಲಿ ಸಂದೇಶವೇನು?

BS Yediyurappa resignation rumours to Monsoon Karnataka rain Flood top 10 News ckm

ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಭಾನುವಾರ ಹೈಕಮಾಂಡ್‌ನಿಂದ ಸಾಂಕೇತಿಕವಾಗಿ ಸಂದೇಶ ರವಾನೆಯಾಗಲಿದ್ದು, ಬಹುತೇಕ ಸೋಮವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಟೋಕಿಯೋ 2020: ಮೀರಾಬಾಯಿ ಚಾನುಗೆ 1 ಕೋಟಿ, ಕೋಚ್‌ಗೆ 10 ಲಕ್ಷ ರೂ ಬಹುಮಾನ..!

BS Yediyurappa resignation rumours to Monsoon Karnataka rain Flood top 10 News ckm

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆಯಲು ಕಾರಣರಾದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೆ ಮಣಿಪುರ ಸರ್ಕಾರ 1 ಕೋಟಿ ರುಪಾಯಿ ಬಹುಮಾನ ಘೋಷಿಸಿದೆ. 49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 202 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಟಿ ಯಶಿಕಾ ಆನಂದ್; ಸ್ನೇಹಿತೆ ಸ್ಥಳದಲೇ ಸಾವು!

BS Yediyurappa resignation rumours to Monsoon Karnataka rain Flood top 10 News ckm

ತೆಲುಗು ಬಿಗ್ ಬಾಸ್ ಸ್ಪರ್ಧಿ ಕಮ್ ನಟಿ ಯಶಿಕಾ ಆನಂದ್ ಮತ್ತು ಸ್ನೇಹಿತೆ ವೆಲ್ಲಿಚೆಟ್ಟು ತಮ್ಮ ಕಾರಿನಲ್ಲಿ ಮಹಾಲಬಲಿಪುರಂ ರಸ್ತೆ ಕಡೆ ಪ್ರಯಾಣ ಮಾಡುತ್ತಿದ್ದರು. ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಕಾರಣ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೆತ್ತಲೆ ಫೋಟೋ ಹಂಚಿಕೊಂಡು ಬಾಡಿ ಶೇಮಿಂಗ್‌ಗೆ No ಹೇಳಿ ನಟಿ ಅನುಪಮಾ!

BS Yediyurappa resignation rumours to Monsoon Karnataka rain Flood top 10 News ckm

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಅನುಪಮಾ ಪರಮೇಶ್ವರಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಹಾಗೂ ತಪ್ಪುಗಳನ್ನು ನೇರವಾಗಿ ಗುರುತಿಸುತ್ತಿದ್ದಾರೆ. ಈ ನಡುವೆ ಎರಡು ಮೂರು ನಗ್ನ ಫೋಟೋಗಳನ್ನು ಹಂಚಿಕೊಂಡ ಕಾರಣ ನೆಟ್ಟಿಗರು ಶಾಕ್ ಆಗಿದ್ದಾರೆ. 

ಗೋವಾದಿಂದಲೇ ಕರ್ನಾಟಕ ಸಿಎಂ ಬದಲಾವಣೆಯ ಸುಳಿವು

BS Yediyurappa resignation rumours to Monsoon Karnataka rain Flood top 10 News ckm

ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದಾರೆ. ಆದ್ರೆ, ಹೈಕಮಾಂಡ್ ಇನ್ನೂ ಯಾವುದೇ ಸ್ಪಷ್ಟ ಸಂದೇಶ ಕೊಟ್ಟಿಲ್ಲ.  

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಒಟ್ಟು ಆಸ್ತಿ ಎಷ್ಟಿದೆ ನೋಡಿ!

BS Yediyurappa resignation rumours to Monsoon Karnataka rain Flood top 10 News ckm

ಬಾಲಿವುಡ್‌ನ ನಟ-ನಟಿಯರ ಪಟ್ಟಿಯಲ್ಲಿ ಅತಿ ಹೆಚ್ಚು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಒಟ್ಟು ಆಸ್ತಿ ಎಷ್ಟಿದೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಶಿಲ್ಪಾ ಬ್ಯೂಸಿಯಾಗಿದ್ದಾರೆ, ಉದ್ಯಮದಲ್ಲಿ ರಾಜ್‌ ತೊಡಗಿಸಿಕೊಂಡಿದ್ದಾರೆ. ಕೋಟಿ ಕೋಟಿ ಆಸ್ತಿ ಇದ್ದರೂ ರಾಜ್‌ ತಪ್ಪು ದಾರಿ ಹಿಡಿದಿದ್ದು ಯಾಕೆ?

ಜನಜೀವನದ ಮೇಲೆ ಮಾರಕ ಪರಿಣಾಮ ಬೀರಿದ ಡೆಡ್ಲಿ ಪ್ರವಾಹ : ಮೈ ಜಲ್ ಎನ್ನಿಸೋ ದೃಶ್ಯಗಳು

BS Yediyurappa resignation rumours to Monsoon Karnataka rain Flood top 10 News ckm

ಸಂಪೂರ್ಣ ದೇಶವೇ ರಣಬೀಕರ ಪ್ರವಾಹಕ್ಕೆ ಸಿಕ್ಕು ತತ್ತರಿಸುತ್ತಿದೆ.  ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಮನೆಗಳು ಕುಸಿದು ಬಿದ್ದು ನೆಲೆಯಿಲ್ಲದೇ ಜನರು ಸುರಿವ ಮಳೆ ಕೊರೆವ ಚಳಿಯಲ್ಲೇ ಥರಗುಟ್ಟುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ಟ್ವೀಟ್ ಕೂಡ ಗೊಂದಲದ ಗೂಡು; ವಿಶ್ವಕುಸ್ತಿಯನ್ನು ಒಲಿಂಪಿಕ್ ಎಂದು ಟ್ವೀಟ್, ಬಳಿಕ ಡಿಲೀಟ್!

BS Yediyurappa resignation rumours to Monsoon Karnataka rain Flood top 10 News ckm

ಕೊರೋನಾ ಲಸಿಕೆ, ಕೃಷಿ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಜನರಲ್ಲಿ ಇಲ್ಲದ ಗೊಂದಲ ಸೃಷ್ಟಿಸಿರುವುದು ಸಾಬೀತಾಗಿದೆ. ಇದೀಗ ಟೋಕಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಇವೆರಡು ಬೇರೇ ಬೇರೆ ಕ್ರೀಡಾಕೂಟವಾಗಿದ್ದರು, ಕಾಂಗ್ರೆಸ್ ನಾಯಕರ ಟ್ವೀಟ್‌ಗಳಲ್ಲಿ ಎಲ್ಲವೂ ಟೋಕಿಯೋ ಒಲಿಂಪಿಕ್ಸ್ ಎಂದು ಹೇಳಿದ್ದಾರೆ.
 
Follow Us:
Download App:
  • android
  • ios