ಮೇ 2ರ ಬಳಿಕ ನನ್ನ ಹಳೇ ಟ್ವೀಟ್ ನೋಡಿ: ಬಿಜೆಪಿಗೆ ಚುನಾವಣಾ ತಂತ್ರಗಾರನ ಸಲಹೆ!...

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಕಿಡಿ ಕಾರಿರುವ ಪ್ರಶಾಂತ್ ಕಿಶೋರ್ ಟ್ವೀಟ್ ಒಂದನ್ನು ಮಾಡುತ್ತಾ 'ಮೇ. 2 ರಂದು ಫಲಿತಾಂಶ ಬಂದ ಬಳಿಕ ನೀವು ನನ್ನ ಹಳೇ ಟ್ವೀಟ್‌ಗಳ ಬಗ್ಗೆ ಮಾತನಾಡಬಹುದು' ಎಂದಿದ್ದಾರೆ.

'ದೇಶದ ಅತ್ಯಂತ ಫಿಟ್‌ ನಾಯಕ': ರಾಗಾ ಆಬ್ಸ್‌, ಬೈಸೆಪ್ಸ್‌ಗೆ ಮೆಚ್ಚುಗೆಯ ಮಹಾಪೂರ!...

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಫೋಟೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಫೋಟೋ ಜನರಿಗೆ ಅದೆಷ್ಟು ಇಷ್ಟವಾಗಿದೆ ಎಂದರೆ, ನೋಡುಗರು ರಾಹುಲ್‌ ಗಾಂಧಿಯ ಫಿಟ್ನೆಸ್‌ಗೆ ಮಾರು ಹೋಗಿದ್ದಾರೆ, ಅಲ್ಲದೇ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅತ್ಯಂತ ಅನುಭವಿ ನಾಯಕ: 79ನೇ ವಸಂತಕ್ಕೆ ಕಾಲಿಟ್ಟ ಬಿಎಸ್‌ವೈಗೆ ಮೋದಿ ಶುಭಾಶಯ!...

ಇಂದು ಸಿಎಂ ಯಡಿಯೂರಪ್ಪಗೆ ಹುಟ್ಟುಹಬ್ಬದ ಸಂಭ್ರಮ. 79ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ  ಸಚಿವರು, ಶಾಸಕರು ಸೇರಿದಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡಾ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಡಿಯೂರಪ್ಪರನ್ನು ಅತ್ಯಂತ ಅನುಭವಿ ನಾಯಕ ಎಂದು ಕರೆದಿದ್ದಾರೆ.

ಜಸ್ಪ್ರೀತ್ ಮನವಿಗೆ ಸ್ಪಂದಿಸಿದ ಬಿಸಿಸಿಐ; 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ!...

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇದೀಗ ಅಂತಿಮ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ. 

ಬೆತ್ತಲೆ ಫೋಟೋ ಕೊಡಿ ಎಂದ ಅಭಿಮಾನಿ: ಖಡಕ್ ಉತ್ತರ ಕೊಟ್ಟ ನಟಿ...

ಆದರೆ ಅಭಿಮಾನಿಯೊಬ್ಬರು ಬೆತ್ತಲೆ ಫೋಟೋ ಕೇಳಿದಾಗ ನಟಿ ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ..?ಖಡಕ್ ಉತ್ತರ ಕೊಟ್ಟ ನಿರೂಪಕಿ

ಮುಂಬೈಯಲ್ಲಿ ದೀಪಿಕಾ ಪಡುಕೋಣೆ ಪರ್ಸ್‌ ಕದಿಯಲು ಯತ್ನಿಸಿದ ಜನ!...

ದೀಪಿಕಾ ಪಡುಕೋಣೆ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಯಾರೋ ಒಬ್ಬರು ನಟಿಯ ಪರ್ಸ್ ಅನ್ನು ಕದಿಯಲು ಪ್ರಯತ್ನಿಸಿದರು. ನಂತರ ಸಾಕಷ್ಟು ಕೋಲಾಹಲ ಉಂಟಾಯಿತು. ಅಂತಿಮಮಾಗಿ  ದೀಪಿಕಾ ಹೇಗೋ  ತನ್ನ ಕಾರನ್ನು ತಲುಪಲು ಸಾಧ್ಯವಾಯಿತು. ಇಲ್ಲಿದೆ ನೋಡಿ ಘಟನೆಯ ಫೋಟೋಗಳು ಮತ್ತು ವಿವರ.

ಮತ್ತೆ ಕುಸಿದ ಗೋಲ್ಡ್ ರೇಟ್, ಚಿನ್ನ ಕೊಳ್ಳೋರಿಗೆ ಬಂಪರ್!...

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 26ಗೋಲ್ಡ್ ರೇಟ್

ವಿಶ್ವದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು, ಬೆಲೆ 3 ಲಕ್ಷ ರೂಪಾಯಿ, 40 ಲಕ್ಷದ ಟೆಸ್ಲಾಗೆ ಪೈಪೋಟಿ!...

ಎಲೆಕ್ಟ್ರಿಕ್ ವಾಹನಗಳಲ್ಲಿ ಅವಿಷ್ಕಾರಗಳು, ಸಂಶೋಧನೆಗಳು ನಡೆಯತ್ತಲೇ ಇದೆ. ಕೈಗೆಟುಕುವ ಬೆಲೆ, ಗರಿಷ್ಠ ಮೈಲೇಜ್ ನೀಡಲು ಎಲ್ಲಾ ಕಂಪನಿಗಳು ಶ್ರಮಿಸುತ್ತಿದೆ. ಆದರೆ ಸದ್ಯ ಎಲೆಕ್ಟ್ರಿಕ್ ವಾಹನಗಳ ಬೆಲೆ ಕೊಂಚ ದುಬಾರಿ ಇದರ ನಡುವೆ 3 ಲಕ್ಷ ರೂಪಾಯಿ ಆರಂಭಿಕ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರು ಭಾರಿ ಸಂಚಲನ ಮೂಡಿಸಿದೆ.

ರಾತ್ರಿ ನಾನು ಮಲಗಲ್ಲ ಎಂದ ಸನ್ನಿ: ಕಾರಣ..?...

ಬಾಲಿವುಡ್ ನಟಿ ಸನ್ನಿ ಲಿಯೋನ್ ರಾತ್ರಿ ಹೊತ್ತು ಮಲಗೋದಿಲ್ವಂತೆ. ಏನದು ರೀಸನ್...?

ಪಾಕ್‌ ಗಡಿಯಲ್ಲಿ ಶಾಂತಿ, ಮೆತ್ತಗಾದ ಇಮ್ರಾನ್‌ ಖಾನ್‌, ಹಿಂದಿದ್ದಾರೆ ಮಾಸ್ಟರ್ ಮೈಂಡ್ ಧೋವಲ್!...

ಭಾರತ ಹಾಗೂ ಪಾಕಿಸ್ತಾನ ದಿಢೀರನೆ ಕದನ ವಿರಾಮ ಒಪ್ಪಂದ ಪಾಲಿಸುವ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಪಾತ್ರವಿದೆ ಎಂದು ತಿಳಿದು ಬಂದಿದೆ.