Asianet Suvarna News Asianet Suvarna News

ಬಡವರಿಗೆ BSY ಗಿಫ್ಟ್; ದೀಪಾವಳಿಗೆ ಸನ್ನಿ ಆಫರ್; ಇಲ್ಲಿವೆ ಅ.15ರ ಟಾಪ್ 10 ಸುದ್ದಿ!

ರಾಜ್ಯದ ಬಡ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಶಾದಿ ಭಾಗ್ಯ ನೀಡಿದ್ದರೆ, BSY ಮದುವೆ ಭಾಗ್ಯ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಹೊಸ ಆಫರ್ ನೀಡಿದ್ದಾಳೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್, ವಿನಯ್ ಗುರೂಜಿ ಭಕ್ತರ ಪುಂಡಾಟ ಸೇರಿದಂತೆ ಅ.15ರ ಟಾಪ್ 10 ಸುದ್ದಿ ಇಲ್ಲಿವೆ.

Bs yadiyurappa to Sunny Leone top 10 news of October 15
Author
Bengaluru, First Published Oct 15, 2019, 4:59 PM IST

1) ರಾಜ್ಯದ ಬಡ ಜನರಿಗೆ ಬಂಪರ್ ಗಿಫ್ಟ್ : ಇದು BSY ಸರ್ಕಾರದ ಮೊದಲ ಯೋಜನೆ!

Bs yadiyurappa to Sunny Leone top 10 news of October 15

ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲು ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ.  ಬಡವರಿಗಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಮುಂದಿನ ವರ್ಷವೇ ಈ ನೂತನ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ. 


2) ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನ ಕ್ರೌರ್ಯ; ಬಡವರ ಮೇಲೆ ಯಾಕಿಲ್ಲಾ ಕನಿಕರ?

Bs yadiyurappa to Sunny Leone top 10 news of October 15

ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನೊಬ್ಬ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹರಿದಾಡುತ್ತಿರುವ ಈ ವಿಡಿಯೋ ಅದೆಲ್ಲೋ ಉತ್ತರ ಪ್ರದೇಶ ಅಥವಾ ಬಿಹಾರದ್ದು ಅಲ್ಲ! ನಮ್ಮ ಬೆಂಗಳೂರಿನದ್ದೇ! ಆ ಗಾರ್ಡ್ ಪೆಟ್ಟು ತಿನ್ನುತ್ತಿರುವುದು ನೋಡುವಾಗ ಅಯ್ಯೋ ಪಾಪ ಅನಿಸುತ್ತದೆ. 

3) ಅಸಿಸ್ಟಂಟನ್ನು ಮದುವೆಯಾಗಲು ಇಸ್ಲಾಂಗೆ ಪರಿವರ್ತನೆಯಾಗಿದ್ದ ಪಿಎಂಸಿ ಮಾಜಿ ಎಂಡಿ!

Bs yadiyurappa to Sunny Leone top 10 news of October 15

ಬಹುಕೋಟಿ ಪಂಜಾಬ್‌ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಸಂಬಂಧ ಅಮಾನತಾಗಿರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌, ತನ್ನ ಆಪ್ತ ಸಹಾಯಕಿಯನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

4) ಮಾಧ್ಯಮ ನಿಷೇಧ ಆಯ್ತು, ವಿವಾದದ ಕಿಡಿ ಹೊತ್ತಿಸಿದೆ ಸ್ಪೀಕರ್ ಮತ್ತೊಂದು ನಡೆ!

Bs yadiyurappa to Sunny Leone top 10 news of October 15

ಟಿವಿ ಮಾಧ್ಯಮಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ವಿಧಾನಮಂಡಲ ಅಧಿವೇಶನಕ್ಕೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಕಾಗೇರಿ ಆದೇಶ ಹೊರಡಿಸಿದ್ದರು. ಪತ್ರಕರ್ತರು ಅದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. 


5) ಟೆಸ್ಟ್ ರ‍್ಯಾಂಕಿಂಗ್: ಸ್ಮಿತ್ ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದೆ ಹೆಜ್ಜೆ ಬಾಕಿ..!

Bs yadiyurappa to Sunny Leone top 10 news of October 15

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲ ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್‌ಗಿಂತ ಕೊಹ್ಲಿ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದಾರೆ. 

6) ದೀಪಾವಳಿಗೆ ಸನ್ನಿ ಲಿಯೋನ್ ಕಡೆಯಿಂದ ಬಂಪರ್ ಆಫರ್ !ಮಿಸ್ ಮಾಡ್ಲೇಬೇಡಿ!

Bs yadiyurappa to Sunny Leone top 10 news of October 15

ಮೋಹಕ ತಾರೆ, ಮಾದಕ ಚೆಲುವೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಗಾಗ ಶಾಕ್, ಆಫರ್ ಎಲ್ಲಾ ಕೊಡುತ್ತಿರುತ್ತಾರೆ. ಈಕೆಯ ಹೆಸರೇ ಒಂದು ಮೋಡಿ. ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳು ಖುಷಿಪಡುತ್ತಾರೆ. ಒಂದು ಲುಕ್ ಗೆ ಫಿದಾ ಆಗುತ್ತಾರೆ. ಇನ್ನು ಈಕೆಯ ಫಿಲ್ಮ್ ಗಲ ಬಗ್ಗೆಯಂತೂ ಕೇಳುವುದೇ ಬೇಡ. ಎಲ್ಲರ ಮೊಬೈಲ್ ಗಳಲ್ಲಿ ಓಡಾಡುತ್ತಿರುತ್ತದೆ. ಇದೀಗ ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ನೀಡಿದ್ದಾಳೆ.

7) ಸುದೀಪ್ ಅಭಿಮಾನಿ ಮೇಲೆ ಹಲ್ಲೆ ಮಾಡಿದ ವಿನಯ್ ಗುರೂಜಿ ಭಕ್ತರು!

Bs yadiyurappa to Sunny Leone top 10 news of October 15

ಫೇಸ್‌ಬುಕ್‌ನಲ್ಲಿ ವಿನಯ್‌ ಗುರೂಜಿ ಅವರ ವಿರುದ್ಧ ಬರಹವನ್ನು ಪ್ರಚಾರ ಮಾಡಿದ್ದ ಸುದೀಪ್ ಅಭಿಮಾನಿ ಮೇಲೆ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ಗುರೂಜಿ ಭಕ್ತರನ್ನು ಬಂಧಿಸಲಾಗಿದೆ.

8) ಅನೈ​ತಿ​ಕ ಸಂಬಂಧ: ಗಂಡನನ್ನೇ ಕೊಂದ ಹೆಂಡ್ತಿ , ಪ್ರಿಯ​ಕರನ ಬಂಧ​ನ!

Bs yadiyurappa to Sunny Leone top 10 news of October 15

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ರಾಮನಗರ ಟೌನ್‌ ಪೊಲೀಸರು ಬೇಧಿ​ಸು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

9) ಅಮೆಜಾನ್ ದಿಢೀರ್ ನಿರ್ಧಾರ: ಸ್ವಿಗಿ, ಜೊಮ್ಯಾಟೋಗೆ ಹರಿಸಿದೆ ಬೆವರ!

Bs yadiyurappa to Sunny Leone top 10 news of October 15

ಭಾರತದಲ್ಲಿ ಆಹಾರ ಪೂರೈಕೆ ಆ್ಯಪ್‌ ಬಿಡುಗಡೆ ಮಾಡಲು ಅಮೆಜಾನ್ ಸಿದ್ಧತೆ ನಡೆಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಸ್ವಿಗ್ಗಿ, ಜೊಮ್ಯಾಟೋ ಹಾಗೂ ಇತರ ಆ್ಯಪ್‌ ಆಧಾರಿತ ಆಹಾರ ಪೂರೈಕೆ ಕಂಪನಿಗಳಲ್ಲಿ ಆತಂಕ ಮನೆ ಮಾಡಿದೆ.

10) ವೀರ ಸಾವರ್ಕರ್‌ಗೆ ಭಾರತ ರತ್ನ: ಮಹಾರಾಷ್ಟ್ರ ಗೆಲ್ಲಲು ಬಿಜೆಪಿ ಪ್ರಯತ್ನ!

Bs yadiyurappa to Sunny Leone top 10 news of October 15

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಅಧಿಕಾರಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದೆ.

Follow Us:
Download App:
  • android
  • ios