ಬ್ರೂನೈ :  ಸಲಿಂಗ ಕಾಮ ಮತ್ತು ವ್ಯಭಿಚಾರ ಹಲವು ದೇಶಗಳಲ್ಲಿ ಕಾನೂನು ಬಾಹಿರ. ಆದರೆ, ಈ ತಪ್ಪಿಗೆ ಎಲ್ಲಿಯಾದರೂ ಮರಣದಂಡನೆ ಶಿಕ್ಷೆ ವಿಧಿಸುತ್ತಾರೆಯೇ ಎಂದು ಪ್ರಶ್ನಿಸಬೇಡಿ. 

ಬ್ರೂನೈ ದೇಶದಲ್ಲಿ ಮುಂದಿನ ವಾರದಿಂದ ಸಲಿಂಗ ಕಾಮ ಮತ್ತು ವ್ಯಭಿಚಾರಕ್ಕೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಲಾಗುತ್ತದೆ. ಕಟ್ಟಾಇಸ್ಲಾಂ ಸಂಪ್ರದಾಯವಾದಿ ರಾಷ್ಟ್ರವಾಗಿರುವ ಬ್ರೂನೈ ಅತ್ಯಂತ ಕಠಿಣ ದಂಡ ಸಂಹಿತೆಯನ್ನು ಏ.3ರಿಂದ ಜಾರಿ ಮಾಡುತ್ತಿದೆ. 

ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಗುತ್ತದೆ. ಸಮ್ಮತಿಯ ಸಲಿಂಗ ಕಾಮವನ್ನೂ ಅಪರಾಧವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಸಲಿಂಗ ಕಾಮ ಸಾಬೀತಾದರೆ ಮರಣ ದಂಡನೆ ಗ್ಯಾರೆಂಟಿ. ಅಂದಹಾಗೆ ಈ ಶಿಕ್ಷೆ ಮುಸ್ಲಿಮರಿಗೆ ಮಾತ್ರ ಅನ್ವಯವಾಗಲಿದೆಯಂತೆ.