Asianet Suvarna News Asianet Suvarna News

ಮೊಬೈಲ್ ನಲ್ಲಿ ಪೋರ್ನ್ ವೀಕ್ಷಿಸಿದ ಬಾಲಕರಿಂದ ಅತ್ಯಾಚಾರ

ಮೊಬೈಲ್ ನಲ್ಲಿ ಪೋರ್ನ್ ವೀಕ್ಷಿಸಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ ಘಟನೆ ಡೆಹ್ರಾಡೂನ್ ಬೋರ್ಡಿಂಗ್ ಶಾಲೆಯೊಂದರಲ್ಲಿ ನಡೆದಿದೆ. 

Boys Raped 16 Year Old Girl After Wtching Porn
Author
Bengaluru, First Published Sep 21, 2018, 1:41 PM IST
  • Facebook
  • Twitter
  • Whatsapp

ಡೆಹ್ರಾಡೂನ್ :  ಬೋರ್ಡಿಂಗ್ ಶಾಲೆಯಲ್ಲಿ ಕಿರಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ 12ನೇ ತರಗತಿಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 

ಮೊಬೈಲ್ ನಲ್ಲಿ ಪೋರ್ನ್ ಚಿತ್ರವನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳು  10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ.

ಆಗಸ್ಟ್ 14ರಂದು  ಸ್ವಾತಂತ್ರ್ಯ ದಿನಾಚರಣೆ  ಹಿನ್ನೆಲೆಯಲ್ಲಿ ಅದರ ತಯಾರಿಗಾಗಿ  ಕರೆಸಿಕೊಂಡು ಈ ವೇಳೆ  ಅತ್ಯಾಚಾರ ಎಸಗಿದ್ದಾರೆ. 

ಈ ಘಟನೆ ಬಳಿಕ ಆಕೆ ಗರ್ಭ ಧರಿಸಿದ್ದು, ಶಾಲಾ ಆಡಳಿತ ಮಂಡಳಿ ಈ ವಿಚಾರವನ್ನು ಮುಚ್ಚಿಟ್ಟು ಆಕೆಗೆ ಗರ್ಭಪಾತ ಮಾಡಿಸಲು ಯತ್ನಿಸಿದ್ದರು ಎನ್ನಲಾಗಿದೆ. 

ಅಲ್ಲದೇ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ನಿರ್ದೇಶಕರು ಹಾಗೂ ಪ್ರಿನ್ಸಿಪಾಲ್ ಅವರನ್ನು ಬಂಧಿಸಲಾಗಿದೆ. ಅಲ್ಲದೇ ಶಾಲೆಯ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಉತ್ತರಾಖಂಡ್ ಸರ್ಕಾರ ಹೇಳಿದೆ. 

Follow Us:
Download App:
  • android
  • ios