ಮುಂಬೈ: ಸಲಿಂಗಕಾಮಕ್ಕೆ ಬಲವಂತ ಮಾಡುತ್ತಿದ್ದ ಸ್ನೇಹಿತನಿಂದ ಸ್ವಯಂ ರಕ್ಷಣೆಗಾಗಿ ಆತನನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದ ಕೊಲೆ ಪ್ರಕರಣದ ದೋಷಿಯೊಬ್ಬನ ಶಿಕ್ಷೆಯ ಪ್ರಮಾಣವನ್ನು ಬಾಂಬೆ ಹೈಕೋರ್ಟ್‌ ಇಳಿಕೆ ಮಾಡಿದೆ. 

ಮುಂಬೈಯ ನಾಗಪದ ಪ್ರದೇಶದಲ್ಲಿ 2011ರಲ್ಲಿ ಕೊಲೆಯೊಂದು ನಡೆದಿತ್ತು. ಮುಂಬೈನ ಸೆಷನ್ಸ್‌ ಕೋರ್ಟ್‌ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಆತನ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಇದೊಂದು ಹತ್ಯೆಯಲ್ಲದ ಉದ್ದೇಶಪೂರ್ವಕವಲ್ಲದ ಹತ್ಯೆ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, ಆರೋಪಿಯು ಈಗಾಗಲೇ ಕಳೆದಿರುವ ಏಳು ವರ್ಷ ಜೈಲು ಶಿಕ್ಷೆಗೇ ಮಿತಿಗೊಳಿಸಿತು. 

ಸ್ನೇಹಿತನ ಸಲಿಂಗಕಾಮದ ಬೇಡಿಕೆ ನಿರಾಕರಿಸಿದುದಕ್ಕೆ ಆತ ಚೂರಿಯಿಂದ ದಾಳಿಗೆ ಯತ್ನಿಸಿದ್ದ, ತನಗೆ ಗಂಭೀರ ಗಾಯಗೊಳಿಸಿದ್ದ. ಈ ವೇಳೆ ಆತನಿಂದ ಚೂರಿ ಕಿತ್ತುಕೊಂಡು ಸ್ವಯಂ ರಕ್ಷಣೆಗಾಗಿ ದಾಳಿ ನಡೆಸಿದ್ದೆ, ಇದರಲ್ಲಿ ಆತನ ಹತ್ಯೆಯ ಉದ್ದೇಶವಿರಲಿಲ್ಲ ಎಂದು ಆರೋಪಿ ಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದ.