ಪೇಶಾವರ/ಕರಾಚಿ: ಪಾಕಿಸ್ತಾನದ ಎರಡು ಚುನಾವಣಾ ರ‍್ಯಾಲಿ ಮೇಲಿನ ಪ್ರತ್ಯೇಕ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ರಾಷ್ಟ್ರ ರಾಜಕೀಯ ಮುಖಂಡರು ಸೇರಿದಂತೆ ಒಟ್ಟು 100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 

ಅಲ್ಲದೆ, ಈ ದುರ್ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಅಧ್ಯಕ್ಷ ಮಮ್ನೂನ್‌ ಹೂಸೇನ್‌ ಮತ್ತು ಪ್ರಧಾನಿ ನಾಸಿರುಲ್‌ ಮುಲ್‌ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ಪಾಕಿಸ್ತಾನ ಸಂಸತ್‌ ಚುನಾವಣೆ(ಜು.25) ಹತ್ತಿರವಾಗುತ್ತಿರುವ ಬೆನ್ನಲ್ಲೇ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆ ಹಾಳುಗುತ್ತಿದೆ. 

ಬಲೂಚಿಸ್ತಾನ ಅವಾಮಿ ಪಕ್ಷದ ಮುಖಂಡ ಸಿರಾಜ್‌ ರೈಸಿನಿ ಅವರು ಶುಕ್ರವಾರ ಏರ್ಪಡಿಸಿದ್ದ ರ‍್ಯಾಲಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸಿರಾಜ್‌ ರೈಸಿನಿ ಸಾವನ್ನಪ್ಪಿದ್ದಾರೆ.