Asianet Suvarna News Asianet Suvarna News

ಡೈರೆಕ್ಟರ್ ಕಾಮ ಪುರಾಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಬಾಲಿವುಡ್ ನಟಿ

ನಟಿ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ಹೊರಿಸಿದ ಲೈಂಗಿಕ ಕಿರುಕುಳದ ಬೆಂಕಿ ಇನ್ನೂ ತಣ್ಣಗಾಗಿಲ್ಲ. ಆಗಲೇ ಮತ್ತೊಬ್ಬ ಬಾಲಿವುಡ್ ನಟಿ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ. 

Bollywood Actress Kangana Ranaut has alleged sexual abuse Vikas Bahl
Author
Bengaluru, First Published Oct 7, 2018, 10:44 PM IST

ಮುಂಬೈ, [ಅ.07]: ಬೂದಿ ಮುಚ್ಚಿದ ಕೆಂಡದಂತೆ ಇರುವ ಈ ಲೈಂಗಿಕ ಕಿರುಕುಳದ ಪ್ರಕರಣ ಒಂದೊಂದಾಗಿಯೇ ಹೊರಗೆ ಬರುತ್ತಿವೆ. ನಟಿ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ಹೊರಿಸಿದ ಲೈಂಗಿಕ ಕಿರುಕುಳದ ಬೆಂಕಿ ಇನ್ನೂ ತಣ್ಣಗಾಗಿಲ್ಲ. ಆಗಲೇ ಮತ್ತೊಬ್ಬ ಬಾಲಿವುಡ್ ನಟಿ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ.

 ಕ್ವೀನ್ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ. ಕ್ವೀನ್ ಚಿತ್ರದ ಸೆಟ್ ನಲ್ಲಿ ಡೈರೆಕ್ಟರ್ ವಿಕಾಸ್ ನಡೆದುಕೊಂಡ ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತನಗಾದ ಕರಾಳ ಸಂಗತಿಗಳನ್ನು ಕಂಗನಾ ಹೊರ ಹಾಕು ಒಂದು ಕಾರಣವೂ ಇದೆ. ಅದೇನೆಂದರೆ ಇತ್ತೀಚೆಗೆ ಸಂತ್ರಸ್ತೆಯೊಬ್ಬರು ನಿರ್ದೇಶಕ ವಿಕಾಸ್ ವಿರುದ್ಧ ಲೈಂಗಿಕ ಆರೋಪ ಮಾಡಿದ್ದರು.

ವಿಕಾಸ್ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಫ್ಯಾಂಟ ಫಿಲಂಸ್ ಮಹಿಳಾ ಉದ್ಯೋಗಿ ಆ ಸಂಸ್ಥೆಯ ಪಾಲುದಾರರಾಗಿದ್ದ ನಿರ್ದೇಶಕ ಅನುರಾಜ್ ಕಶ್ಯಪ್ ಅವರಿಗೆ ದೂರು ನೀಡಿ ಕೆಲಸ ಬಿಟ್ಟಿದ್ದರು. ಆ ಮಹಿಳೆಯನ್ನು ಕಂಗನಾ ಬೆಂಬಲಿಸಿದ್ದರು. 

ನಾನು ಆಕೆಯನ್ನು ಸಂಪೂರ್ಣವಾಗಿ ನಂಬುತ್ತೇನೆ. ಯಾಕೆಂದರೆ ವಿಕಾಸ್ ನಿಂದ ನಾನು ಕೂಡ ತೊಂದರೆಗೆ ಒಳಗಾಗಿದ್ದೇನೆ’ ಎಂದು ಕಂಗನಾ ಹೇಳಿದ್ದಾರೆ.  ಕ್ವೀನ್ ಸಿನಿಮಾದ ವೇಳೆಗಾಗಲೇ ವಿಕಾಸ್ ಗೆ ಮದುವೆಯಾಗಿದ್ದರೂ, ಪ್ರತಿ ದಿನ ಹುಡುಗಿಯರ ಜತೆ ಸಂಪರ್ಕವಿಟ್ಟುಕೊಂಡಿದ್ದರು.

ಅದೂ ಅಲ್ಲದೇ, ಹಲವು ಸಂದರ್ಭಗಳಲ್ಲಿ ವಿಕಾಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ.  ಅವರು ನನ್ನನ್ನು ಬಿಗಿದಪ್ಪಿ, ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದರು. ಅವರಿಂದ ಬಿಡಿಸಿಕೊಳ್ಳಲು ನಾನು ತುಂಬಾ ಕಷ್ಟ ಪಡಬೇಕಾಗುತ್ತಿತ್ತು ಎಂದು ಕಂಗನಾ ತಮಗಾದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.

Follow Us:
Download App:
  • android
  • ios