ನವದೆಹಲಿ (ನ. 26): ಚರ್ಮದ ಪಾದರಕ್ಷೆಗಳಾದ ರೆಡ್‌ಚೀಫ್‌ ಬ್ರಾಂಡ್‌ನ ಪ್ರಚಾರ ರಾಯಭಾರಿಯಾಗಿ ಬಾಲಿವುಡ್‌ನ ಪ್ರಸಿದ್ಧ ನಟ ವಿಕ್ಕಿ ಕೌಶಾಲ್‌ ಅವರನ್ನು ಲೀಯಾನ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ಆಯ್ಕೆ ಮಾಡಿಕೊಂಡಿದೆ.

'ತಲೈವಿ' ಗಾಗಿ ಕಂಗನಾ ದಿನಾ ಹಾರ್ಮೋನ್ ಮಾತ್ರೆ ನುಂಗುತ್ತಿದ್ದರಂತೆ!

ಕಳೆದ 21 ವರ್ಷಗಳಿಂದ ದೇಶಾದ್ಯಂತ ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆರಾಮದಾಯಕ ಮತ್ತು ಆಕರ್ಷಕವಾಗಿ ಕಾಣುವ ಪಾದರಕ್ಷೆಗಳನ್ನು ನೀಡುತ್ತಾ ಬಂದಿರುವ ರೆಡ್‌ಚೀಫ್‌ ಇದೀಗ, ದೇಶಾದ್ಯಂತ 3000ಕ್ಕೂ ಹೆಚ್ಚು ಮಲ್ಟಿಬ್ರಾಂಡೆಡ್‌ ಮಳಿಗೆಗಳು, 170ಕ್ಕೂ ಹೆಚ್ಚು ವಿಶೇಷ ಮಳಿಗೆಗಳು ಮತ್ತು ಎಲ್ಲಾ ಇ-ಮಾರುಕಟ್ಟೆಗಳ ಮೂಲಕ ಸದೃಢ ವಿತರಣಾ ಜಾಲ ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ಞಾನ ಚಂದಾನಿ ಹೇಳಿದ್ದಾರೆ.

ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?

ಇನ್ನು ರೆಡ್‌ಚೀಫ್‌ ಪಾದರಕ್ಷೆಗಳ ನೂತನ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ವಿಕ್ಕಿ ಕೌಶಾಲ್‌, ರೆಡ್‌ಚೀಫ್‌ನೊಂದಿಗಿನ ಸಹಭಾಗಿತ್ವವು ಅದ್ಭುತ. ಗೃಹ ತಯಾರಿಕೆಯ ಪಾದರಕ್ಷೆಗಳ ಬ್ರಾಂಡ್‌ ಆಗಿರುವ ಇದು ಭಾರೀ ಆಕರ್ಷಕವಾಗಿದೆ ಎಂದು ತಿಳಿಸಿದ್ದಾರೆ.