ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿ ಕೆಟ್ಟ ರೀತಿಯ ಫೋಟೋ ಅಪ್ ಲೋಡ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಪೊಲೀಸರ ವಿಚಾರಣೆ ಎದುರಿಸಬೇಕಾಗಿದೆ.

ಯಾವುದೆ ಸಿನಿಮಾದ ಪೋಸ್ಟರ್ ಒಂದನ್ನು ಬಳಸಿಕೊಂಡು ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಮತ್ತು ,ಮಮತಾ ಬ್ಯಾನರ್ಜಿ ಜತೆಯಾಗಿ ನಿಂತಿರುವಂತೆ ಚಿತ್ರಿಸಿ ಸೋಶಿಯಲ್ ಮೀಡಿಯಾಕ್ಕೆ ಕಾರ್ಯಕರ್ತ ಅಪ್ ಲೋಡ್ ಮಾಡಿದ್ದ.

ಮದುವೆಯಾಗದ ವಯಸ್ಸಿನಲ್ಲಿ ಮದುವೆಯಾಗದೆ ಹಾಗೆ ಉಳಿದುಕೊಂಡರೆ ಅವರು ಹುಚ್ಚರಾಗುತ್ತಾರೆ. ಅವರ ಆಳ್ವಿಕೆಯಲ್ಲಿ ಇಡೀ ಪಶ್ಚಿಮ ಬಂಗಾಳವೇ ಹುಚ್ಚರ ತವರೂರಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು.