ನವದೆಹಲಿ :  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳು ಭರದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಆದರೆ  ಇದೇ ವೇಳೆ ಬಿಜೆಪಿಗೆ ಗುಡ್ ನ್ಯೂಸ್ ಒಂದು ಲಭ್ಯವಾಗಿದೆ. 

ಬಿಜೆಪಿ ಆಂತರಿಕ ಸಮೀಕ್ಷೆ ನಡೆದಿದ್ದು ಅದರಲ್ಲಿ ಭರ್ಜರಿ ಬಹುಮತದೊಂದಿಗೆ ಬಿಜೆಪಿ ಗೆಲ್ಲಲಿದೆ ಎನ್ನಲಾಗಿದೆ. ಮತ್ತೆ 2019ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದು ಮತ್ತೊಮ್ಮೆ ಎನ್ ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. 

"

ದೇಶದ ಅರ್ಧದಷ್ಟು  ಜನರ ಮತ ಎನ್ ಡಿಎ ಪರವಾಗಿದೆ. 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಲಿದೆ ಎನ್ನಲಾಗಿದೆ. ಈ ಮೂಲಕ ಎನ್ ಡಿಎ ಸಂಖ್ಯಾಬಲ 360 ದಾಟುವುದು ಬಹುತೇಕ ಖಚಿತವಾಗಿದೆ. ಶೇ.90ರಷ್ಟು ಗ್ರಾಮೀಣ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ತಲುಪಿವೆ. ಇದರಿಂದ ಮೋದಿ ಪರವಾದ ನಿಲುವು ಹೆಚ್ಚಿನ ಜನರಲ್ಲಿದೆ ಎಂದು ಈ ಸಮೀಕ್ಷೆ ಮೂಲಕ ತಿಳಿದು ಬಂದಿದೆ. 

2014ರಲ್ಲಿ 283 ಕ್ಷೇತ್ರಗಳಲ್ಲಿ ಐತಿಹಾಸಿಕವಾಗಿ ಗೆಲುವನ್ನು ದಾಖಲಿಸಿದ್ದ ಬಿಜೆಪಿ ನೇತೃತ್ವದ ಎನ್ ಡಿಎ ಪಡೆ ಮತ್ತೊಮ್ಮೆ  2019ರ ಲೋಕಸಭಾ ಚುನಾವಣೆಯಲ್ಲಿಯೂ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆ ಹೇಳಿದೆ.   

2014ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಬಿಜೆಪಿಗೆ 365 ಪ್ಲಸ್ ಗುರಿ, ನಮೋ ಭಾರತ್ ಪಡೆ ಅಸ್ತಿತ್ವಕ್ಕೆ