ಮೈಸೂರು, [ನ.05]: ರಾಜ್ಯದಲ್ಲಿ ಮತ್ತೆ ಟಿಪ್ಪು ಪರ-ವಿರೋಧಗಳು ವ್ಯಕ್ತವಾಗಿದ್ದು, ರಾಜಕಾರಣಿಗಳು ಒಬ್ಬರಿಗೊಬ್ಬರು ಕೆಸರೆರಚಾಟ ಮುಂದುವರೆಸಿದ್ದಾರೆ.

ಒಂದು ಕಡೆ ರಾಜ್ಯ ಸರ್ಕಾರ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದರೆ, ಮತ್ತೊಂದೆಡೆ ಇದರ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿದೆ.

ನ.10ಕ್ಕೆ ಟಿಪ್ಪು ಜಯಂತಿ: ನಿರ್ಧಾರ ಪ್ರಕಟಿಸಿದ ಸರ್ಕಾರ

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರೊಂದಿಗೆಮಾತನಾಡದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಕನ್ನಡ ಭಾಷೆಯ ವಿರೋಧಿ. ಪರ್ಷಿಯನ್ ಭಾಷೆಯ ಪ್ರೇಮಿ, ಮೈಸೂರು ಅರಸರ ದಿಗ್ಬಂಧನ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಟಿಪ್ಪು ಜಯಂತಿಯಂದು ರಾಜ್ಯಾದ್ಯಂತ ಬಿಜೆಪಿ ಯುವ ಪ್ರತಿಭಟನೆ ಮಾಡುತ್ತೆ. ಬಹಳ ಮುಖ್ಯವಾಗಿ ಮೈಸೂರು ಭಾಗದಲ್ಲಿ ನಮ್ಮ ಪ್ರತಿಭಟನೆ ಜೋರಾಗಿರುತ್ತೆ ಎಂದರು.

ಟಿಪ್ಪು ಚಿತ್ರದುರ್ಗದ ಕೋಟೆಯ ನಾಯಕ ಸಮುದಾಯದ 20 ಸಾವಿರ ಜನರನ್ನ ಮತಾಂತರ ಮಾಡಿದ. ಕೊಡಗು ಭಾಗದ ಲಕ್ಷಾಂತರ ಜನರನ್ನ ಒತ್ತಾಯದಿಂದ ಮತಾಂತರ ಮಾಡಿದ.

ಮೈಸೂರು ಅರಸರ ಕನ್ನಡದ ಪತ್ರ ವ್ಯವಹಾರವನ್ನ ಪರ್ಷಿಯನ್ ಭಾಷೆಗೆ ಬದಲಾಯಿಸಿದ. ಟಿಪ್ಪು ಖಡ್ಗದ ಮೇಲೆ ಹಿಂದುಗಳ ಹತ್ಯೆ ಮಾಡಲು ಉಪಯೋಗಿಸುತ್ತೇನೆ ಅಂತ ಬರೆಸಿಕೊಂಡಿದ್ದಾನೆ

ಇಂತಹ ಟಿಪ್ಪು ಜಯಂತಿ ನಾವು ಏಕೆ ಮಾಡಬೇಕು? ನಾವು 9ರಂದು ಪ್ರತಿಭಟನೆ ಮಾಡ್ತೇವೆ, ಧಮ್ಮಿದ್ದರೆ ನಮ್ಮನ್ನು ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್ ಸವಾಲು ಹಾಕಿದರು.