ನವದೆಹಲಿ(ಜ.18): ಇದೀಗ ಎಲ್ಲಿ ನೋಡಿದರಲ್ಲಿ #10YearChallengeನದ್ದೇ ಸುದ್ದಿ. ಸಾಮಾಜಿಕ ಜಾಲತಾಣಗಳಂತೂ #10YearChallengeನಿಂದ ತುಂಬಿ ಹೋಗಿವೆ.

ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ, ಈ ಅಭಿಯಾನವನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.

2014ರಿಂದ 2019ರ ಅವಧಿಯಲ್ಲಿ ಮೋದಿ ಸರ್ಕಾರದಿಂದ ಜಾರಿಗೆ ಬಂದ ಹಲವು ಜನಪ್ರಿಯ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ವಿವರ ಸಮೇತ ಬಿಜೆಪಿ  #5YearChallenge ಅಭಿಯಾನವನ್ನು ಕೈಗೆತ್ತಿಕೊಂಡಿದೆ.


ಇಷ್ಟೇ ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧೀಯಲ್ಲಿ ನಡೆದ ಅನೇಕ ಹಗರಣಗಳ ಕುರಿತು ಜನಜಾಗೃತಿ ಮೂಡಿಸಲು ಮತ್ತು ಆಗಿನ ದೇಶದ ಪರಿಸ್ಥಿತಿ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ #5YearChallenge ಅಭಿಯಾನ ಆರಂಭಿಸಿದೆ.