ಬೆಂಗಳೂರು, [ಜ.06]: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರ ತುಮಕೂರು ಪ್ರವಾಸ ರದ್ದಾಗಿದೆ.

 ಅಮಿತ್​ ಶಾ ಜ.9 ರಂದು ತುಮಕೂರಿನಲ್ಲಿ ಆಯೋಜಿಸಿದ್ದ ಪಕ್ಷದ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಅಷ್ಟೇ ಅಲ್ಲದೇ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಆಗಮಿಸುತ್ತಿದ್ದರು.

ಆದ್ರೆ, ನವದೆಹಲಿಯಲ್ಲಿ ಸಂಸತ್ ಅಧಿವೇಶನದ ನಡೆಯುತ್ತಿದೆ. ಅಲ್ಲದೇ, ಅಧಿವೇಶನದ ಅವಧಿ ಕೂಡಾ ವಿಸ್ತರಿಸಲಾಗಿದೆ.

 ಈ ಹಿನ್ನೆಲೆಯಲ್ಲಿ ಅಮಿತ್​  ಶಾ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹಾಗಾಗಿ ರಾಜ್ಯ ಪ್ರವಾಸ ರದ್ದು ಮಾಡಿದ್ದಾರೆ. 

ಅಧಿವೇಶನ ಮುಕ್ತಾಯದ ನಂತರ ಶಾ ಪ್ರವಾಸದ ದಿನಾಂಕ ನಿಗದಿಯಾಗಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.