ಬೆಂಗಳೂರು (ಜ. 29): ಹತ್ತು ದಿನಗಳ ಹಿಂದೆ ಹರ್ಯಾಣ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ಬೀಡುಬಿಟ್ಟಿದ್ದರಷ್ಟೆ. ಒಂದು ದಿನ ಈಶ್ವರಪ್ಪ ಅವರು ಶಾಸಕರಾದ ರಾಮದಾಸ್‌, ರವಿ ಸುಬ್ರಮಣ್ಯ, ಅರಗ ಜ್ಞಾನೇಂದ್ರರನ್ನು ಕರೆದುಕೊಂಡು ಮಾಧ್ಯಮಗಳ ಜೊತೆ ಮಾತನಾಡಬೇಕೆಂದು ಗೇಟ್‌ ಬಳಿ ಬಂದಿದ್ದರು.

ಸಿದ್ಧಗಂಗಾ ಶ್ರೀಗಳ ದರ್ಶನಕ್ಕೆ ಮೋದಿ ಯಾಕೆ ಬರಲಿಲ್ಲ?

ಆಗ, ಈಶ್ವರಪ್ಪ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದವರು, ಉಳಿದವರೆಲ್ಲ ಶಾಸಕರು ಎಂದು ಗೊತ್ತಿಲ್ಲದ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ಗಳು, ‘ಇಲ್ಲಿ ಯಾರನ್ನು ಕೇಳಿ ಬಂದಿರಿ, ವಾಪಸ್‌ ಹೋಗಿ’ ಎಂದು ಜೋರಾಗಿ ಹಿಂದಿಯಲ್ಲಿ ಕೂಗಾಡಿದ್ದಾರೆ. ಅದರಿಂದ ಮುಜುಗರಕ್ಕೊಳಗಾದ ಎಲ್ಲರೂ ಸುಮ್ಮನೆ ಒಳಗೆ ಹೋಗಿದ್ದಾರೆ. ನಂತರ ರೆಸಾರ್ಟ್‌ ವಾಸ ಮುಗಿಸಿ ವಾಪಸ್‌ ಹೋಗುವಾಗ ಮಾಧ್ಯಮಗಳನ್ನು ಕಂಡು ರೇಣುಕಾಚಾರ್ಯ ಬೈಟ್‌ ಕೊಡಲು ಇಳಿದಿದ್ದರು.

ಸಿದ್ಧಗಂಗಾ ಶ್ರೀಗಳಿಗೆ ಸಿಗದ ಭಾರತರತ್ನ: ಇಲ್ಲಿದೆ ಹಿಂದಿನ ಕಾರಣ

ಆಗ ರೇಣುಕಾಚಾರ್ಯಗೆ ಕ್ಯಾಮೆರಾ ಎದುರೇ ಏಕವಚನದಲ್ಲಿ ಕಾರಿನ ಡ್ರೈವರ್‌ ಕೂಗತೊಡಗಿದ. ಹರ್ಯಾಣದ ಗ್ರಾಮೀಣ ಭಾಷೆಯಲ್ಲಿ ‘ನೀನು ಬಂದರೆ ಸರಿ, ಇಲ್ಲವಾದರೆ ಇಲ್ಲಿಯೇ ಬಿಟ್ಟುಹೋಗುತ್ತೇನೆ’ ಎಂದು ಹೇಳಿದಾಗ ಹಿಂದಿ ಬಾರದ ರೇಣುಕಾಚಾರ್ಯಗೆ ಏನು ಮಾತನಾಡಬೇಕೆಂದು ಗೊತ್ತಾಗಲಿಲ್ಲ. ಆಗ ಡ್ರೈವರ್‌ ಕಾರು ಚಾಲು ಮಾಡಿ ಮಾಡಿ ಹೊರಟೇ ಬಿಟ್ಟಿದ್ದಾನೆ.

ರೇಣುಕಾಚಾರ್ಯ ‘ಭಯ್ಯಾ ರುಕೋ ರುಕೋ’ ಎಂದು ಓಡುತ್ತಾ ಹೋಗಿ ಗಾಡಿ ಹತ್ತಿದ್ದಾರೆ. ಇನ್ನೂ ತಮಾಷೆಯ ಸಂಗತಿ ಎಂದರೆ ರೆಸಾರ್ಟ್‌ನಲ್ಲಿದ್ದ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಮೀಸೆಯಲ್ಲಿ ಎರಡು ಬಿಳಿ ಕೂದಲುಗಳಿವೆ ಎಂದು ಸಲೂನ್‌ಗೆ ಹೋಗಿ ಕಟ್‌ ಮಾಡಿಸಿಕೊಂಡು, ಒಂದು ಸಾವಿರ ರುಪಾಯಿ ಬಿಲ… ನೋಡಿ ಹೌಹಾರಿದರಂತೆ.

- ಪ್ರಶಾಂತ್ ನಾತು, ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್  ಮಾಡಿ