ಚಿತ್ರದುರ್ಗ (ಜ. 29): ಸಿದ್ದರಾಮಯ್ಯ ನಿನ್ನೆ ಮಹಿಳೆ ವೇಲ್ ಹಿಡಿದು ಎಳೆದ ಪ್ರಕರಣಕ್ಕೆ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. 

ಮೊದಲಿನಿಂದ ಸಿದ್ದರಾಮಯ್ಯ ಸಂಸ್ಕಾರ ಇಲ್ಲದ ವ್ಯಕ್ತಿ. ರಾವಣಸುರನಿಗೆ ಇರುವ ಎಲ್ಲಾ ಗುಣಗಳು ಸಿದ್ದರಾಮಯ್ಯನ ಬಳಿ ಇವೆ. ಮುಂಚಿನಿಂದ ಆ ಮನುಷ್ಯನನ್ನ ನೋಡಿದವರು ಸೋಲಿಸಿದರು.  ಹತ್ತಿರದಿಂದ ನೋಡಿದ ಯಾರು ಸಿದ್ದರಾಮಯ್ಯನನ್ನ ಒಪ್ಪಿಕೊಳ್ಳುವುದಿಲ್ಲ. ಪ್ರಾಮಾಣಿಕತೆ, ಮಹಿಳೆಯರ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ. ಆದರೆ ದೊಡ್ಡ ವ್ಯಕ್ತಿಯಲ್ಲ ಎಂದು ಶ್ರೀರಾಮುಲು ಟೀಕಿಸಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರ ಮೇಲೆಯೇ ದರ್ಪ ತೊರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಸಿದ್ದರಾಮಯ್ಯ ಪುತ್ರ, ವರುಣಾ ಕ್ಷೇತ್ರ ಶಾಸಕ ಯತೀಂದ್ರ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದಾಗ, ಸಿದ್ದರಾಮಯ್ಯ ಗರಂ ಆಗಿದ್ದಾರೆ. ಆಕೆಯ ಕೈಯಿಂದ ಮೈಕನ್ನು ಕಿತ್ತುಕೊಂಡ ಸಿದ್ದರಾಮಯ್ಯ, ಆಕೆಯನ್ನು ಕೂತುಕೊಳ್ಳುವಂತೆ ಬಲವಂತಪಡಿಸಿದ್ದಾರೆ. ಇಡಿಯ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಈ ಘಟನೆಯ ಬಳಿಕ ಸಿದ್ದರಾಮಯ್ಯರನ್ನು ಬಿಜೆಪಿ ದುಶ್ಯಾಸನ ಎಂದು ಟೀಕಿಸಿದೆ.