ಕೊಡಗಿನ ಬಾಲಕನ ಬಗ್ಗೆ ಗುಪ್ತಚರ ತನಿಖೆ ನಡೆಸಿ : ಲೇವಡಿ

https://static.asianetnews.com/images/authors/b348a094-0bef-5801-a1f6-61e57071185f.jpg
First Published 16, Jul 2018, 8:42 AM IST
BJP Leader Sadananda Gowda Slams CM Kumaraswamy
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎರಡೆರಡು ಕರ್ಚೀಫ್ ಒದ್ದೆ ಆಗುವ ತರಹ ಅಳುವುದಕ್ಕೆ ಆಗುತ್ತದೆಯೇ ಹೊರತು ಸತ್ಯಾಂಶ ಕಂಡು ಹಿಡಿ ಯಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದ್ದಾರೆ. 

ಬೆಂಗಳೂರು :  ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎರಡೆರಡು ಕರ್ಚೀಫ್ ಒದ್ದೆ ಆಗುವ ತರಹ ಅಳುವುದಕ್ಕೆ ಆಗುತ್ತದೆಯೇ ಹೊರತು ಸತ್ಯಾಂಶ ಕಂಡು ಹಿಡಿ ಯಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗಿನ ನಿರ್ಲ ಕ್ಷ್ಯದ ಬಗ್ಗೆ ಮಾತನಾಡಿದ್ದ ಬಾಲಕ ಬಿಜೆಪಿಯ ವನು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ದರು. 

ಇದರಲ್ಲಿ ಬಿಜೆಪಿ ಪಾತ್ರ ಇದೆ ಎನ್ನುವು ದಾದರೆ ಮುಖ್ಯಮಂತ್ರಿಗಳೇ ಗುಪ್ತಚರ ಇಲಾ ಖೆಯಿಂದ ತನಿಖೆ ಮಾಡಿಸಲಿ. ಎರಡೆರಡು ಕರ್ಚೀಫ್ ಒದ್ದೆ ಆಗುವ ತರಹ ಅಳುವುದಕ್ಕೆ ಆಗುತ್ತದೆಯೇ ಹೊರತು ತನಿಖೆ ಮಾಡಿಸ ಬೇಕು ಎಂಬುದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದರು. 

ಮುಖ್ಯಮಂತ್ರಿಗಳು ಕೊಡಗಿಗೆ  ಹೋಗಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಅವರು ಕೊಡಗಿಗೆ ರೆಸಾರ್ಟ್‌ಗೆ ಹೋಗುತ್ತಾರೋ ಅಥವಾ ಸಭೆ ನಡೆಸಿ ಸಮಸ್ಯೆ ಪರಿಹರಿಸುತ್ತಾರೋ ಎಂಬುದು ಗೊತ್ತಿಲ್ಲ ಎಂದೂ ಅವರು ಹೇಳಿದರು.

loader