‘ಅತ್ಯಾಚಾರಿಗಳ ತಲೆ ಕಡಿದವರಿಗೆ 5 ಲಕ್ಷ ಬಹುಮಾನ’

BJP leader declares Rs 5 lakh bounty for beheading Mandsaur rape accused
Highlights

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರ ತಲೆ ಕಡಿದವರಿಗೆ 5 ಲಕ್ಷ ಮೊತ್ತದ ಬಹುಮಾನ ನೀಡಲಾಗುವುದು ಎಂದು ಮಂಡಸೂರ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ. 

ಭೋಪಾಲ್ :   ಮಂಡಸೂರ್ ನಲ್ಲಿ ನಡೆದ 8 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರ ತಲೆ ಕಡಿದರೆ 5 ಲಕ್ಷ ಬಹುಮಾನವನ್ನು ನೀಡುವುದಾಗಿ ಮಧ್ಯ ಪ್ರದೇಶದ ಹೊಶಂಗಾಬಾದ್ ಜಿಲ್ಲೆಯ ಬಿಜೆಪಿ ನಾಯಕರೋರ್ವರು ಘೋಷಿಸಿದ್ದಾರೆ.

ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಅವರು  ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರಿಗೆ ಒಂದು ವೇಳೆ ಗಂಭೀರ ಶಿಕ್ಷೆ ತಪ್ಪಿದಲ್ಲಿ ಅವರ ತಲೆ ಕಡಿದರೆ 5 ಲಕ್ಷ ಬಹುಮಾನವನ್ನು  ತಾವೇ ನೀಡುವುದಾಗಿ ಹೇಳಿದ್ದಾರೆ. 

ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣವಾದ  ಶಿಕ್ಷೆಯಾಗಬೇಕು ಎನನ್ನುವುದು ನಮ್ಮ ಆಗ್ರಹವಾಗಿದೆ ಎಂದಿದ್ದಾರೆ.  

ಕಳೆದ ಜೂನ್ 28 ರಂದು  ಮಂಡಸೂರ್ ಪ್ರದೇಶದಲ್ಲಿ  8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿತ್ತು.  ಈ ಪ್ರಕರಣ ಸಂಬಂಧ ಈಗಾಗಲೇ  ಇಬ್ಬರನ್ನು ಬಂಧಿಸಲಾಗಿದ್ದು,  ಎಸ್ಐಟಿ ಈ ಸಂಬಂಧ ಗಂಭೀರವಾಗಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ಅಲ್ಲದೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂತ್ರಸ್ತೆಯ ತಾಯಿ ಆಗ್ರಹಿಸಿದ್ದಾರೆ.

loader