ಬಿಜೆಪಿ ಮುಖಂಡನಿಂದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ..?

First Published 9, Feb 2018, 9:37 PM IST
BJP Leader Attempts to Rape 10 year Girl
Highlights

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು 42 ವರ್ಷದ ಆರೋಪಿ ಅಶೋಕ್ ಭಾವಿಕಟ್ಟಿ ಎಂಬಾತ ಚಾಕಲೇಟ್ ಆಮಿಷವೊಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ವಿಜಯಪುರ(ಫೆ.09): ಬಿಜೆಪಿ ಮುಖಂಡನೊಬ್ಬ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಲ್ಲೆ ಯತ್ನಿಸಿದ ಘಟನೆ ವಿಜಯಪುರ ತಾಲೂಕಿನ ಅಡವಿಸಂಗಾಪುರ ಗ್ರಾಮದಲ್ಲಿ ನಡೆದಿದೆ.

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು 42 ವರ್ಷದ ಆರೋಪಿ ಅಶೋಕ್ ಭಾವಿಕಟ್ಟಿ ಎಂಬಾತ ಚಾಕಲೇಟ್ ಆಮಿಷವೊಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪ್ರಕರಣ ಮುಚ್ಚಿಹಾಕಲು ಸ್ಥಳೀಯ ಬಿಜೆಪಿ ನಾಯಕರು ಪ್ರಯತ್ನಿಸುತ್ತಿರುವುದಾಗಿ ಸ್ಥಳೀಯ ಸಂಘಟನೆಗಳ ಕೆಲವು ಸದಸ್ಯರಿಂದ ಆರೋಪಿಸಿದ್ದಾರೆ. ವಿಜಯಪುರ ತಾಲೂಕಿನ ಬಬಲೇಶ್ವರ ಠಾಣಾ ಪೊಲೀಸರಿಂದ ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಶೋಧ ನಡೆಸಿದ್ದಾರೆ.

loader