ಮೆತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಬಿಜೆಪಿ!

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ 

ರಾಮನಗರದಿಂದ ಬೆಂಗಳೂರು ವರೆಗೆ ಪಾದಯಾತ್ರೆ

ಸಂಪೂರ್ಣ ಸಾಲಾಮನ್ನಾಗೆ ಆಗ್ರಹಿಸಿ ಪಾದಯಾತ್ರೆ
 

First Published Jul 26, 2018, 10:17 PM IST | Last Updated Jul 26, 2018, 10:17 PM IST

ಬೆಂಗಳೂರು(ಜು.26): ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಪ್ರಾರಂಭವಾಗಿದೆ.  ಸಿಎಂ ಕುಮಾರಸ್ವಾಮಿ ತವರೂ ಜಿಲ್ಲೆ ರಾಮನಗರದಿಂದ ಈ ಹೋರಾಟಕ್ಕೆ ಚಾಲನೆ ಸಿಕ್ಕಿದೆ.  ಮೈತ್ರಿ ಸರ್ಕಾರದ ವಿರುದ್ಧದ ಹೋರಾಟದ ಮೊದಲ ಭಾಗವಾಗಿ ಸಂಪೂರ್ಣ ಸಾಲಾಮನ್ನಾಗೆ ಆಗ್ರಹಿಸಿ ರಾಂನಗರದಿಂದ ಬೆಂಗಳೂರು ವರೆಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ.

ನಗರದ ಕೆಂಗಲ್ ದೇವಸ್ಥಾನದ ಎದುರಗಡೆಯಿಂದ ಪ್ರಾರಂಭವಾದ ಪಾದಯಾತ್ರೆಗೆ ಬಿಜೆಪಿ ಮುಖಂಡರಾದ ಮಾಜಿ ಶಾಸಕ ಸಿ.ಪಿ. ಯೋಗಿಶ್ವರ್, ಪರಿಷತ್ ಸದಸ್ಯ ರವಿಕುಮಾರ್ ಹಾಗೂ ತೇಜಸ್ವಿನಿ ಗೌಡ ಚಾಲನೆ ನೀಡಿದರು. ಒಟ್ಟು ಮೂರು ದಿನಗಳವರೆಗೆ ಪಾದಯಾತ್ರೆ ನಡೆಯಲಿದ್ದು, ಶನಿವಾರ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಅಂದು ಸಿಎಂ ಗೃಹ ಕಚೇರಿ ಕೃಷ್ಣಾ ಎದುರುಗಡೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಹೆಚ್ಚಿನ ಡೀಟೆಲ್ಸ್ ಗಾಗಿ ಈ ವಿಡಿಯೋ ನೋಡಿ..