ಭೋಪಾಲ್‌ [ನ.01]: ಬಿಸಿಯೂಟದ ಜತೆಗೆ ಮೊಟ್ಟೆನೀಡುವ ಮಧ್ಯಪ್ರದೇಶ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತ ಪಡಿಸಿದ್ದು, ಮಾಂಸಹಾರ ಸೇವನೆ ಮಾಡುವುದರಿಂದ ಮುಂದೆ ಮಾನವರು ನರಭಕ್ಷಕರಾಗಬಹುದು ಎಂದು ಬಿಜೆಪಿ ನಾಯಕ ಗೋಪಾಲ್‌ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಬುಧವಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಂಸಹಾರ ಸೇವನೆ ಸನಾತನ ಸಂಸ್ಕೃತಿಗೆ ವಿರೋಧವಾಗಿದ್ದು, ಬಾಲ್ಯದಿಂದ ಮಾಂಸಹಾರ ಸೇವನೆ ಮಾಡಿದರೆ ಮುಂದೆ ಮನುಷ್ಯನನ್ನು ತಿನ್ನುವವರಾಗಿ ಪರಿವರ್ತನೆಯಾಗಬಹುದು ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಂಟಾಗಿರುವ ಅಪೌಷ್ಠಿಕತೆ ನಿವಾರಣೆಗೆ ಬಿಸಿಯೂಟದ ಜತೆಗೆ ಮೊಟ್ಟೆನೀಡಲು ಸರ್ಕಾರ ನಿರ್ಧಾರ ಮಾಡಿತ್ತು.