ಕೋಲ್ಕತಾ : ಅಮೇಥಿಯಲ್ಲಿ ಸ್ಮೃತಿ ಇರಾನಿ ಬೆಂಬಲಿಗನೋರ್ವನ ಹತ್ಯೆ ನಡೆದ ಬೆನ್ನಲ್ಲೇ ಪಶ್ಚಿಮ ಬಂಗಾಳದ  24ನೇ ಉತ್ತರ ಪರ್ಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. 

ಭಾನುವಾರ ರಾತ್ರಿ 10.30ರ ಸುಮಾರಿಗೆ ಅವರ ನಿವಾಸಕ್ಕೆ ವಾಪಸಾಗುತ್ತಿದ್ದ ವೇಳೆ ಗುಂಡಿಕ್ಕಿ ಚಂದನ್ ಸಾಹು ಎಂಬುವವರನ್ನು ಹತ್ಯೆ ಮಾಡಲಾಗಿದೆ. 

ಜಗದಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲಿತಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೌಸೊಟ್ಟಿ ಪ್ರದೇಶದ ನಿವಾಸಿಯಾದ ಚಂದನ್  ಮೇಲೆ ನಾನ್ವರು ವ್ಯಕ್ತಿಗಳು ಬಂದು ಗುಂಡು ಹಾರಿಸಿದ್ದು, ತಕ್ಷಣವೇ ಅವರನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಕ್ಕೇ ಸಾವನ್ನಪ್ಪಿದ್ದರು. 

ಅಮೇಥಿಯಲ್ಲಿ ಸ್ಮೃತಿ ಇರಾನಿ ಬೆಂಬಲಿಗರಾದ ಸುರೇಂದ್ರ ಸಿಂಗ್ ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿತ್ತು. ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಯಲ್ಲಿ ಸುರೇಂದ್ರ ಸಿಂಗ್ ಮೃತಪಟ್ಟಿದ್ದರು.