ಬಿಗ್ 3: ವಿಜಯಪುರ ಶೌಚಾಲಯ ಬಳಕೆ ಯಾವಾಗ?

ಸಾರ್ವಜನಿಕ ಶೌಚಾಲಯ ಬಳಕೆ ಯಾವಾಗ?

ಕಣ್ಮುಚ್ಚಿ ಕುಳಿತಿರುವ ವಿಜಯಪುರ ಮಹಾನಗರ ಪಾಲಿಕೆ

ಬಳಕೆ ಯೋಗ್ಯವಾಗಿದ್ದರೂ ಅನುಮತಿ ನೀಡದ ಮಹಾನಗರ ಪಾಲಿಕೆ

First Published Jul 14, 2018, 3:40 PM IST | Last Updated Jul 14, 2018, 3:40 PM IST

ವಿಜಯಪುರ(ಜು.14): ವಿಜಯಪುರದ ಮಹಾನಗರ ಪಾಲಿಕೆ ಸುಮಾರು 100 ಸಾರ್ವಜನಿಕ ಶೌಚಾಲಯ ಕಟ್ಟಿಸಿದೆ.  ಆದರೆ ಅದರ ಉಪಯೋಗಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡುತ್ತಿಲ್ಲ.

ಈ ಕಾರಣಕ್ಕೆ ಜನರು ಶೌಚಾಲಯಗಳನ್ನು ಕಟ್ಟಿಗೆ ಇಡಲು ಉಪಯೋಗಿಸುತ್ತಿದ್ದರು. ಈ ಕುರಿತು ಸುವರ್ಣನ್ಯೂಸ್ ಬಿಗ್ 3 ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೇ ಎಚ್ಚೆತ್ತ ಮಹಾನಗರ ಪಾಲಿಕೆ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಶೌಚಾಲಯ ದುರಸ್ತಿ ಕಾರ್ಯ ಮಾಡುವುದಾಗಿ ಭರವಸೆ ನೀಡಿತ್ತು.

ಆದರೆ ಈವರೆಗೂ ಶೌಚಾಲಯ ಬಳಕೆಗೆ ಸಾರ್ವಜನಿಕರಿಗೆ ಅನುಮತಿ ಸಿಕ್ಕಿಲ್ಲದಿರುವುದು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ  ಸಾಕ್ಷಿ. ಈ ಕಾರಣಕ್ಕೆ ಬಿಗ್ 3 ತಂಡ ಮತ್ತೊಮ್ಮೆ ಈ ಕುರಿತು ವರದಿ ಪ್ರಸಾರ ಮಾಡಿದೆ.