Asianet Suvarna News Asianet Suvarna News

ಬಿಗ್ 3 ಇಂಪ್ಯಾಕ್ಟ್: ಬಳ್ಳಾರಿ ಸರ್ಕಾರಿ ಶಾಲೆಗೆ ಕೊನೆಗೂ ಕಾಯಕಲ್ಪ

ಅಭಿವೃದ್ಧಿ ಮತ್ತು ಪರಿಹಾರ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಸುವರ್ಣನ್ಯೂಸ್ ಇದೀಗ ಹೊಸತೊಂದು ಪ್ರಯೋಗಕ್ಕೆ ಕೈಹಾಕಿದೆ. ಸುವರ್ಣನ್ಯೂಸ್ ಆರಂಭಿಸಿರುವ ‘ಬಿಗ್ 3’ ಕಾರ್ಯಕ್ರಮವು ರಾಜ್ಯದಲ್ಲಿ ಸಂಚಲನ ಹುಟ್ಟು ಹಾಕಿದೆಯಲ್ಲದೇ, ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಅಧಿಕಾರಿ ವರ್ಗ/ಜನ ಪ್ರತಿನಿಧಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದೆ.

ಬಳ್ಳಾರಿಯ ಕುಡುತೆನಿ ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಣ ಸಚಿವ ಎನ್. ಮಹೇಶ್ ಡಿಡಿಪಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಶಾಲೆಗೆ ತೆರಳಿ ಕಟ್ಟಡ ರಿಪೇರಿ ಮಾಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. 