ಇದು ಬಿಗ್ 3: ನೊಣ ನೋಡಲು ಬಂದ ಡಿಸಿ!

ಕಾಟ ಕೊಡ್ತಿದ್ದ ನೊಣದ ಸಮಸ್ಯೆಗೆ ಮುಕ್ತಿ! ಸುವರ್ಣನ್ಯೂಸ್ ವರದಿಗೆ ಕೊಪ್ಪಳ ಡಿಸಿ ಸ್ಪಂದನೆ! ಪೊಲೀಸ್ ಕ್ವಾಟರ್ಸ್‌ಗೆ ಭೇಟಿ ಕೊಟ್ಟ ಸುನೀಲ್ ಕುಮಾರ್  

First Published Sep 19, 2018, 3:44 PM IST | Last Updated Sep 19, 2018, 3:44 PM IST

ಕೊಪ್ಪಳ(ಸೆ.19): ಪೊಲೀಸ್ ಕ್ವಾಟರ್ಸ್ ಗೆ ನೊಣದ ಕಾಟ ಅಂತಾ ನಿನ್ನೆಯಷ್ಟೇ ನಿಮ್ಮ ಸುವರ್ಣ ನ್ಯೂಸ್ ನ ಬಿಗ್ 3 ಯಲ್ಲಿ ವರದಿ ಪ್ರಸಾರವಾಗಿತ್ತು.

ಇಂದು ಕೊಪ್ಪಳದ ಬಸಾಪೂರದಲ್ಲಿರುವ ಪೊಲೀಸ್ ಹೆಡ್ ಕ್ವಾಟರ್ಸ್ ಗೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.

ಸ್ಥಳದಲ್ಲೇ ಪರಿಹಾರ ನೀಡಿದ ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಕ್ವಾಟರ್ಸ್ ಪಕ್ಕದಲ್ಲಿರುವ ಕೋಳಿ ಫಾರಂ ಮಾಲೀಕರಿಗೆ ತಾಕೀತು ಮಾಡಿದ್ದಾರೆ. ಬಿಗ್ 3 ವರದಿಯಿಂದ ಪೊಲೀಸ್ ಕ್ವಾಟರ್ಸ್ ನಲ್ಲಿರುವ ೩೮ ಕುಟುಂಬಗಳು ನೆಮ್ಮದಿಯ ನಿದ್ದೆ ಮಾಡುವಂತಾಗಿದೆ.

Video Top Stories