ಕೊರೋನಾ ಆತಂಕದ ನಡುವೆ ಸಿಹಿ ಸುದ್ದಿ ನೀಡಿದ RBI, ಜೀವನಕ್ಕಿಲ್ಲ ಟೆನ್ಶನ್!

ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಕೊರೋನಾ ತುಂಬಿ ತುಳುಕುತ್ತಿದ್ದರೆ, ಇದೀಗ ಹಳ್ಳಿ ಹಳ್ಳಿಗಳಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಜನರು ಆತಂಕದಲ್ಲಿ ದಿನದೂಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್( RBI) ಸಿಹಿ ಸುದ್ದಿ ನೀಡಿದೆ.

ದುಬೆ ಸಾವಿನ ಕೆಲವೇ ತಾಸು ಮುನ್ನ ನಡೆದಿತ್ತು ಈ ಬೆಳವಣಿಗೆ!...

ಪಾತಕಿ ವಿಕಾಸ್‌ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯ ಇದೆ ಎಂದು ಎನ್‌ಕೌಂಟರ್‌ಗೆ ಕೆಲವೇ ಗಂಟೆಗಳ ಮೊದಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು ಎಂಬ ಅಚ್ಚರಿಯ ವಿಷಯ ಬಹಿರಂಗಗೊಂಡಿದೆ.

ಡ್ರ್ಯಾಗನ್‌ಗೆ ಬಿಗ್ ಶಾಕ್: ಚೀನಾ ತೊರೆಯಲು ಟಿಕ್‌ಟಾಕ್‌ ಚಿಂತನೆ!

ಈಗಾಗಲೇ ಭಾರತದಿಂದ ನಿಷೇಧಕ್ಕೆ ಒಳಗಾಗಿ, ಅಮೆರಿಕದಲ್ಲೂ ನಿಷೇಧ ಭೀತಿ ಎದುರಿಸುತ್ತಿರುವ ಚೀನಾ ಮೂಲದ ಟಿಕ್‌ಟಾಕ್‌, ಈ ಪರಿಸ್ಥಿತಿಯಿಂದ ಪಾರಾಗಲು ತನ್ನ ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವತ್ತ ಹೆಜ್ಜೆ ಇಟ್ಟಿದೆ. ಟಿಕ್‌ಟಾಕ್‌ನ ಹೊಸ ಕೇಂದ್ರ ಕಚೇರಿಯನ್ನು ಚೀನಾ ಬಿಟ್ಟು ಬೇರೆ ಯಾವುದಾದರೂ ದೇಶದಲ್ಲಿ ಆರಂಭಿಸುವುದೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಮತ್ತೆ ಪಾಕ್‌ ಮಾನ ಹರಾಜು!

ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಾಕಷ್ಟುಸಾಕ್ಷ್ಯಗಳನ್ನು ನೀಡಿದ್ದೇವೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಕ್ರಮವನ್ನೂ ಕೈಗೊಳ್ಳದೆ ಭಯೋತ್ಪಾದಕರಿಗೆ ‘ರಾಜಾತಿಥ್ಯ’ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಗಂಭೀರ ಆರೋಪ ಮಾಡಿದೆ. ತನ್ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಮತ್ತೊಮ್ಮೆ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದೆ.

ಪ್ಯಾಂಗಾಂಗ್‌ನಿಂದಲೂ ಹಿಂದೆ ಸರಿದ ಚೀನಾ ಸೇನೆ!

ಭಾರತದ ಒತ್ತಡದ ನಂತರ ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ವಿವಾದಿತ ಸ್ಥಳಗಳಿಂದ ಹಿಂದೆ ಸರಿಯಲು ಆರಂಭಿಸಿದ್ದ ಚೀನಾ ಸೇನೆ ಇದೀಗ ನಾಲ್ಕನೇ ವಿವಾದಿತ ಸ್ಥಳವಾದ ಪ್ಯಾಂಗಾಂಗ್‌ ಸರೋವರದಿಂದಲೂ ಹಿಂದೆಗೆದಿದೆ.

ಸುಶಾಂತ್ ಸಾವು ದಾವೂದ್ ಗ್ಯಾಂಗ್‌ ಮಾಡಿದ ಕೊಲೆ; ಮಾಜಿ ರಾ ಅಧಿಕಾರಿ

ನಟ ಸುಶಾಂತ್ ಸಿಂಗ್ ಸಾವಿಗೆ ದಾವೂದ್‌ ಗ್ಯಾಂಗ್‌ ಕಾರಣ ಎಂದು ಮಾಜಿ RAW ಅಧಿಕಾರಿ ಎಸ್‌ ಕೆ ಸೂದ್‌ ಆರೋಪಿಸಿದ್ದಾರೆ. ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ, ಇವರು ಮಾಡಿದ ಆರೋಪ ಮಹತ್ವ ಪಡೆದುಕೊಂಡಿದೆ. 

ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ ಭರ್ಜರಿ ಮೇಲುಗೈ

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ವಿಂಡೀಸ್ ಇನ್ನೂ 99 ರನ್‌ಗಳ ಮುನ್ನಡೆಯಲ್ಲಿದೆ. ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. 

ಕೊರೋನಾ ತಡೆಗೆ ಫೈನಲ್ ಸೂತ್ರ, ಬೆಂಗ್ಳೂರು ಆಗಮನ, ನಿರ್ಗಮನ ಬಂದ್?

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಬೆಂಗಳೂರಿಗೆ ಬರುವ ಮತ್ತು ಹೊರಹೋಗುವ ವಾಹನಗಳ ಮೇಲೆ ನಿರ್ಬಂಧ ಹೇರುವ ಮಾತು ಕೇಳಿಬರುತ್ತಿದೆ.

ವಾರೆನ್‌ ಬಫೆಟ್‌ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ!...

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರೀಗ ಬರ್ಕ್ಶೈರ್‌ ಹಾಥ್‌ವೇ ಸಿಇಒ ವಾರೆನ್‌ ಬಫೆಟ್‌ ಅವರನ್ನು ಹಿಂದಿಕ್ಕಿ ವಿಶ್ವದ 7ನೇ ಶ್ರೀಮಂತ ಎನಿಸಿಕೊಂಡಿದ್ದಾರೆ.

'ಲಾಸ್ಟ್ ವಾರ್ನಿಂಗ್, ನನ್ನನ್ನು ಕಾಪಿ ಮಾಡ್ಬೇಡಿ': ನಟಿ ತ್ರಿಷಾಗೆ ಎಚ್ಚರಿಸಿದ ಮಾಡೆಲ್..!...

ಮಾಡೆಲ್ ಮೀರಾ ಮಿಥುನ್ ತಮಿಳು ನಟಿ ತ್ರಿಷಾ ಕೃಷ್ಣನ್‌ಗೆ ಅವಾಜ್ ಹಾಕಿದ್ದಾರೆ. ನನ್ನನ್ನು ಕಾಪಿ ಮಾಡ್ವೇಡಿ ಅಂತ ಟ್ವೀಟ್ ಟಾಂಗ್ ಕೊಟ್ಟಿದ್ದಾರೆ. ಸದಾ ಕಾಂಟ್ರವರ್ಶಿಯಲ್ ಪೋಸ್ಟ್‌ಗಳನ್ನೇ ಮಾಡುವ ಮಾಡೆಲ್, ಹೊಸ ನಟಿ ಮೀರಾ ಮಿಥುನ್ ತಾನಾ ಸೇರ್‌ನ್‌ಂದ ಕೂಟಂ ಹಾಗೂ 8 ತೋಟಕಲ್ ನಟಿಸಿದ್ದಾರೆ